ಕಲೆಬೆರಕೆ ಸೇಂದಿ ತಯಾರಿಸುವ ಮೇಲೆ ಪ್ರಕರಣ ದಾಖಲು:ಓಂಪ್ರಕಾಶ್ ಮಠಪತಿ

ಸೇಡಂ, ಸೆ 13: ಪಟ್ಟಣದ ದೊಡ್ಡ ಅಗಸಿ ಏರಿಯಾದಲ್ಲಿ ಗಸ್ತು ಮಾಡುತ್ತಿರುವಾಗ ದೊರೆತ ಮಾಹಿತಿಯಂತೆ ಸಾಬವ್ವ ಗಂಡ ನಾಗಪ್ಪ ಭಜಂತ್ರಿ ಎಂಬುವರ ಮನೆ ಮೇಲೆ ದಾಳಿ ಮಾಡಿ, ಕಾನೂನು ಬಾಹಿರವಾಗಿ ಕಲೆಬೆರಕೆ ಸೇಂದಿಯನ್ನು ತಯಾರಿಸಿ, ಅಕ್ರಮವಾಗಿ ಮಾರಾಟಮಾಡಲು ಸಂಗ್ರಹಿಸಿಟ್ಟ 30 ಲೀಟರ್ ಕಲಬೆರಿಕೆ ಸೇಂದಿಯನ್ನು ಜಪ್ತಿಪಡಿಸಿಕೊಂಡಿದು ಕೃತ್ಯ ಸ್ಥಳದಿಂದ ಓಡಿ ಹೋಗಿ ತಲೆಮೆರೆಸಿಕೊಂಡ ಆರೋಪಿತಳ ವಿರುದ್ಧ ಅಬಕಾರಿ ನಿರೀಕ್ಷಕರು ಸೇಡಂ ವಲಯ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿರುವುದಾಗಿ ಅಬಕಾರಿ ಇಲಾಖೆಯ ನಿರೀಕ್ಷಕರಾದ ಓಂ ಪ್ರಕಾಶ್ ಮಠಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.