
ಕಲಬುರಗಿ,ಮಾ.25-ನಗರದ ಆರ್ಚಿಡ್ ಮಾಲ್ ಹಿಂಭಾಗದ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದ ಕಾರಿನ ಎಡಗಡೆ ಹಿಂಭಾಗದ ಗ್ಲಾಸ್ ಒಡೆದು ಕಳ್ಳರು ಕಾರಿನೊಳಗಡೆ ಇರಿಸಲಾಗಿದ್ದ 35 ಸಾವಿರ ರೂ.ಮೌಲ್ಯದದ ಹೆಚ್.ಪಿ.ಕಂಪನಿಯ ಎಲೈಟ್ ಬುಕ್ ಲ್ಯಾಪ್‍ಟಾಪ್, 21 ಸಾವಿರ ರೂ.ಮೌಲ್ಯದ ಮೊಟೋ ಎಡ್ಜ್ 14 ನ್ಯೂ ಮೊಬೈಲ್, 10 ಸಾವಿರ ರೂ.ಮೌಲ್ಯದ ಬೆಳ್ಳಿ ಗಣೇಶ ಮೂರ್ತಿ ಮತ್ತು 5 ಸಾವಿರ ರೂ.ಮೌಲ್ಯದ ಹಾರ್ಡ್‍ಡಿಸ್ಕ್ ಮತ್ತು 2,500 ರೂ.ನಗದು ಕಳವು ಮಾಡಿದ್ದಾರೆ ಎಂದು ನಗರದ ಕಾಳೆ ಲೇಔಟ್ ನಿವಾಸಿ, ಸಿವಿಲ್ ಇಂಜಿನಿಯರ್ ಶಿವಸಾಗರ ಮಾನಕರ್ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಇವರು ನಗರದ ಆರ್ಚಿಡ್ ಮಾಲ್‍ನಲ್ಲಿರುವ ಐನಾಕ್ಸ್ ಸಿನೆಮಾ ಥಿಯೆಟರ್‍ನಲ್ಲಿ ದುರಂದರ್-2 ಸಿನೆಮಾ ನೋಡಲು ಗೆಳೆಯ ಶೇಖರ್ ಪಡಶೆಟ್ಟಿ ಅವರಿಗೆ ಸೇರಿದ ಕಾರಿನಲ್ಲಿ ಹೋಗಿ, ಕಾರನ್ನು ಮಾಲ್ ಹಿಂಭಾಗದ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದರು. ಈ ವೇಳೆ ಕಳ್ಳರು ಕಾರಿನ ಎಡಗಡೆ ಹಿಂಭಾಗದ ಗ್ಲಾಸ್ ಒಡೆದು ಲ್ಯಾಪ್‍ಟಾಪ್, ಮೊಬೈಲ್, ಬೆಳ್ಳಿ ಗಣೇಶ ಮೂರ್ತಿ, ಹಾರ್ಡ್ ಡಿಸ್ಕ್ ಮತ್ತು 2,500 ರೂ.ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.




























