
ಜೇವರ್ಗಿ:ಡಿ.4: ಬೈಕ್‍ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಯುವತಿಯೊಬ್ಬಳು ಮೃತಪಟ್ಟ ಘಟನೆ ತಾಲ್ಲೂಕಿನ ರಾಸಣಗಿ ಕ್ರಾಸ್ ಬಳಿ ಬುಧವಾರ ಸಂಜೆ ಸಂಭವಿಸಿದೆ.
ಭೂಮಿಕಾ ಮಲ್ಲಪ್ಪ ಹಂಗರಗಾ (20) ಎಂಬ ಯುವತಿ ಮೃತಪಟ್ಟಿದ್ದು, ಬೈಕ್ ಸವಾರ ಅಮೋಘಸಿದ್ದ ಭೀಮರಾಯ(21) ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಡಿ.5 ರಂದು ತಾಲ್ಲೂಕಿನ ರಾಸಣಗಿ
ಗ್ರಾಮದ ಸಂಬಂಧಿಕರ ಮನೆಯಲ್ಲಿ ಮದುವೆ ಕಾರ್ಯಕ್ರಮ ನಿಶ್ಚಯ ಮಾಡಲಾಗಿತ್ತು. ಚಿಕ್ಕಮ್ಮನ ಮಗ ಅಮೋ-ಘಸಿದ್ದನೊಂದಿಗೆ ಭೂಮಿಕಾ ಬೈಕ್ ಮೇಲೆ ಯಡ್ರಾಮಿಯಿಂದ ರಾಸಣಗಿಗೆ ತೆರಳುವ ಸಂದರ್ಭದಲ್ಲಿ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್‍ಐ ಗಜಾನಂದ ಬಿರಾದಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜೇವರ್ಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































