Home ಕ್ರೈಂ ಸುದ್ದಿಗಳು ಬಸ್-ಬೈಕ್ ಮುಖಾಮುಖಿ ಡಿಕ್ಕಿ:ಸ್ಥಳದಲ್ಲೇ ಯುವಕ ಸಾವು

ಬಸ್-ಬೈಕ್ ಮುಖಾಮುಖಿ ಡಿಕ್ಕಿ:ಸ್ಥಳದಲ್ಲೇ ಯುವಕ ಸಾವು

ವಿಜಯಪುರ, ಏ.1:ಬಸ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಯುವಕನೋರ್ವ ಮೃತಪಟ್ಟ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್ ಗೇಟ್ ಬಳಿ ಮಂಗಳವಾರ ನಡೆದಿದೆ.
ಇದೇ ವೇಳೆ ಘಟನೆಯಲ್ಲಿ ಬಸ್, ಬೈಕ್ ಸುಟ್ಟು ಕರುಕಲಾಗಿದೆ.
ಸಿಂದಗಿ ಪಟ್ಟಣದ ಅಭಿಷೇಕ ಸಾಹೇಬಗೌಡ ನಾಗರಾಳ(19) ಮೃತ ಯುವಕ.
ವಿಜಯಪುರದಿಂದ ಬರುತ್ತಿದ್ದ ಬಸ್ ಸಿಂದಗಿಯಿಂದ ವಿಜಯಪುರ ಕಡೆ ಹೊರಟಿದ್ದ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಎರಡು ವಾಹನಗಳು ಸುಟ್ಟು ಕರುಕಲಾಗಿವೆ. ಯುವಕನ
ಮೃತದೇಹ ಸಹ ಭಾಗಶಃ ಸುಟ್ಟಿದೆ.
ಸಿಂದಗಿ ಪೆÇಲೀಸ್ ಠಾಣೆ ವ್ತಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.