
ಬೀದರ್: ಫೆ.೨೬:ನೂತನ ಮಹಾನಗರ ಪಾಲಿಕೆ ಕಚೇರಿಯನ್ನು ನಗರದ ಹೊರವಲಯದಲ್ಲಿರುವ ಶಹಾಪುರ ಗೇಟ್ ಬಳಿ ಸ್ಥಳಾಂತರಿಸದೆ ಇದ್ದ ಜಾಗದಲ್ಲಿಯೇ ನಿರ್ಮಿಸುವಂತೆ ಪಾಲಿಕೆ ಸದಸ್ಯರಾದ ಶಶಿ ಹೊಸಳ್ಳಿ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಇದ್ದ ಜಾಗದಲ್ಲಿಯೆ ರ‍್ನಾಲ್ಕು ಅಂತಸ್ತಿನಲ್ಲಿ ಕಚೇರಿ ನಿರ್ಮಿಸಬಹುದು. ಆದರೆ ಪೌರಾಡಳಿತ ಸಚಿವ ರಹಿಮ್ ಖಾನ್, ಹಾಲಿ ಮಹಾನಗರ ಪಾಲಿಕೆ ಅಧ್ಯಕ್ಷ ಮಹಮ್ಮದ್ ಗೌಸ್ ಹಾಗೂ ಇತರೆ ಕಾಂಗ್ರೆಸ್ ಸದಸ್ಯರ ಜಮಿನು ಇದ್ದು, ಅವುಗಳಿಗೆ ಹೆಚ್ಚಿನ ಬೆಲೆ ಬಂದು ಲಾಭ ಮಾಡಿಕೊಳ್ಳಲೆಂದೆ ಅಲ್ಲಿ ಶಿಪ್ಟ್ ಮಾಡಲು ಮೊನ್ನೆ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದ್ದಾರೆ ಎಂದು ಆರೋಪಿಸಿದರು.
ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿದೆ ಎಂಬ ಮಾತ್ರಕ್ಕೆ ಏಕಸ್ವಾಮ್ಯವಾಗಿ ವರ್ತಿಸುತ್ತಿರುವ ಕೈ ಪಡೆ ಸಾರ್ವಜನಿಕರ ಹಿತ ಚಿಂತಿಸದೆ ಬರೀ ಹಣ ಹೊಡೆಯುವ ಹುನ್ನಾರ ನಡೆಸುತ್ತಿದೆ ಎಂದು ದೂರಿದರು.
ನಗರದ ನೂರ್ ಕಾಲೇಜು ಎದುರಿರುವ ಪಾಲಿಕೆ ವ್ಯಾಪ್ತಿಯಲ್ಲಿರುವ ೧೦ ಎಕರೆ ಜಮಿನಿನಲ್ಲಿ ಬರೀ ಎಂಟು ಎಕರೆ ಜಮಿನಿಗೆ ಕಪಂAಡ್ ಗೊಡೆ ನಿರ್ಮಿಸಲಾಗಿದ್ದು, ಎರಡು ಎಕರೆ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದಂತಾಗಿದೆ. ಹೀಗೆ ಕಾಂಗ್ರೆಸ್ ಸದಸ್ಯರು ತಮ್ಮ ಮನಸ್ಸಿಗೆ ಬಂದAತೆ ವರ್ತಿಸುತ್ತಿರುವುದನ್ನು ನಗರದ ಜನ ಗಮನಿಸುತ್ತಿರುವರು ಎಂದರು.
ಭೂವಿ ಸಮಾಜಕ್ಕೆ ಸೇರಿದ ಅತ್ಯಂತ ಹಳೆಯ ಮಠವಾದ ನಿರಂಜನ ಸ್ವಾಮಿ ಮಠದ ಜಾಗವನ್ನು ವಕ್ಫ್ ಆಸ್ತಿ ಎಂದು ಘೋಷಿಸಬೇಕೆಂದು ಎಮ್.ಐ.ಎಮ್ ಸದಸ್ಯರೊಬ್ಬರ ಮಾತಿಗೆ ಮೆಲುಕು ಹಾಕಿದ ಅಡಳಿತ ಪಕ್ಷದ ಸದಸ್ಯರು ಅದನ್ನು ವಕ್ಫ್ ಆಸ್ತಿ ಎಂದು ಘೋಷಿಸಲು ಮುಂದಾಗಿದ್ದರು.ಎಲ್ಲೆಡೆ ವ್ಯಾಪಕ ವಿರೋಧ ಕೇಳಿ ಬಂದ ಹಿನ್ನೆಲೆ ಆ ಆದೇಶ ವಾಪಸ್ಸು ಪಡೆದಿರುವುದಕ್ಕೆ ಸಮಾಧಾನವಿದೆ ಎಂದರು.
ನಗರ ವಾಸಿಗಳಿಗೆ ಕುಡಿಯುವ ನೀರು, ನಿರಂತರ ವಿದ್ಯುತ್, ಒಳ ಚರಂಡಿ ಇತ್ಯಾದಿ ಮೂಲಭೂತ ವ್ಯವಸ್ಥೆ ಬಗ್ಗೆ ತಲೆ ಕೆಡಸಿಕೊಳ್ಳದ ಅಡಳಿತಾರೂಢ ಸದಸ್ಯರು ಹಣದ ಹಿಂದೆ ಬಿದ್ದ ಕಾರಣ ಅಭಿವೃದ್ಧಿ ಮರಿಚಿಕೆಯಾಗಿದೆ ಎಂದು ಕುಟುಕಿದ ಅವರು, ಶಹಾಪುರ್ ಗೇಟ್ ಬಳಿ ನಿರ್ಮಿಸಲು ಉದ್ದೇಸಿಸಿರುವ ಮಹಾನಗರ ಪಾಲಿಕೆ ಕಚೇರಿಯನ್ನು ಸ್ಥಳಾಂತರಿಸದೆ ಇದ್ದ ಜಾಗದಲ್ಲಿಯೇ ನಿರ್ಮಿಸಿ. ಇಲ್ಲವಾದರೆ ೧೫ ದಿವಸದ ಒಳಗೆ ಎಲ್ಲ ಸಮುದಾಯದ ಮುಖಂಡರ ಜೊತೆ ಚರ್ಚಿಸಿ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಾಲಿಕೆಯ ಇನ್ನೋರ್ವ ಹಿರಿಯ ಸದಸ್ಯರಾದ ರಾಜಾರಾಮ ಚಿಟ್ಟಾ ಮಾತನಾಡಿ, ಬೊಮ್ಮಗೊಂಡೇಶ್ವರ ವೃತ್ತದ ಬಳಿಯ ಜಾಬಶೆಟ್ಟಿ ಕಾಂಪ್ಲಿಕ್ಸ್ ನಿಂದ ಗುಂಪಾ ರಿಂಗ್ ರಸ್ತೆ, ಅಲ್ಲಿಂದ ಹೈದ್ರಾಬಾದ್ ರಸ್ತೆ ವರೆಗೆ ವಿದ್ಯೂತ್ ದೀಪ ವ್ಯವಸ್ಥೆ ಇಲ್ಲದೇ ಕತ್ತಲು ಅವರಿಸಿದೆ. ಈಗ ಕೆಲವೆಡೆ ೨೦ ಕಂಬಗಳನ್ನು ಹಾಕಲಾಗಿದೆ. ಉಳಿದ ಪೂರ್ಣ ಪ್ರಮಣದ ವಿದ್ಯುತ್ ದೀಪಗಳ ಕಂಬಗಳನ್ನು ಅಳವಡಿಸುವಂತೆ ಅವರು ಆಗ್ರಹಿಸಿದರು.
ಪಾಲಿಕೆ ಸದಸ್ಯರಾದ ರಾಜು ಚಿಂತಾಮಣಿ ಮಾತನಾಡಿದರು. ಸದಸ್ಯರಾದ ಶಿವಕುಮಾರ ಬಾವಿಕಟ್ಟಿ, ಪ್ರಭು ಪ್ರದಾನ, ಅಭಿ ಕಾಳೆ, ಸಂತೋಷ ಪಾಟೀಲ, ಸಂಗಮೇಶ, ಸಂಗಮೇಶ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.




























