Home ಸುದ್ದಿ ಅಂತರಾಷ್ಟ್ರೀಯ ಭಾರತದ ಮೇಲೆ ಬಾಂಬ್ ದಾಳಿ ಎಚ್ಚರಿಕೆ

ಭಾರತದ ಮೇಲೆ ಬಾಂಬ್ ದಾಳಿ ಎಚ್ಚರಿಕೆ

ವಾಷಿಂಗ್ಟನ್,ಮಾ.೨೨- ಪಾಕಿಸ್ತಾನ, ಅಥವಾ ಇರಾನ್ ಮೇಲೆ ಅಮೆರಿಕ ಪರಮಾಣು ಬಾಂಬ್ ಗುರಿಯಾಗಿಸಿಕೊಂಡು ದಾಳಿ ನಡೆಸಿದರೆ ಪ್ರತಿಯಾಗಿ ಭಾರತದ ದೆಹಲಿ, ಮುಂಬೈ ಸೇರಿದಂತೆ ವಿವಿಧ ನಗರಗಳ ಮೇಲೆ ಬಾಂಬ್ ದಾಳಿ ಮಾಡುತ್ತೇವೆ ಎಂದು ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್ ಬಾಸಿತ್ ಹೇಳಿಕೆ ಆಶ್ಚರ್ಯ ಮೂಡಿಸಿದೆ.

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತರುವ ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಪಾಕಿಸ್ತಾನದ ಮಾಜಿ ರಾಜತಾಂತ್ರಿಕರ ವಿವಾದಾತ್ಮಕ ಹೇಳಿಕೆ ವಿವಾದ ಮತ್ತು ಕಳವಳಕ್ಕೆ ಕಾರಣವಾಗಿದೆ.

ವಿದೇಶಿ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನ, ಭಾರತವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಿದೆ ಎಂದು ಭಾರತದಲ್ಲಿ ಕಾರ್ಯನಿರ್ವಹಿಸಿದ್ದ ಪಾಕಿಸ್ತಾನದ ಮಾಜಿ ರಾಯಬಾರಿ ಅಬ್ದುಲ್ ಬಾಸಿತ್ ಆಶ್ಚರ್ಯಕರ ಹೇಳಿಕೆ ನೀಡಿದ್ದು ಇದರಿಂದ ಭಾಋತ-ಮ ಪಾಕಿಸ್ತಾನ ನಡುವೆ ಮತ್ತಷ್ಟು ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ

ಅಮೆರಿಕಾದ ಭವಿಷ್ಯದ ದಾಳಿಯ ಚರ್ಚೆ ಕೇಂದ್ರೀಕರಿಸಿ ಹೇಳಿಕ ನೀಡಿದ ಅಬ್ದುಲ್ ಬಾಸಿತ್, “ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಎರಡನೇ ಆಲೋಚನೆಯಿಲ್ಲದೆ ಭಾರತ, ಮುಂಬೈ, ನವದೆಹಲಿಯ ಮೇಲೆ ದಾಳಿ ಮಾಡಬೇಕಾಗುತ್ತದೆ. ನಾವು ಅದನ್ನು ಬಿಡುವುದಿಲ್ಲ, ನಂತರ ಏನಾಗುತ್ತದೆ ಎಂದು ನೋಡೋಣ” ಎಂದು ಗುಡುಗಿದ್ದಾರೆ

“ಕೆಟ್ಟ ಸನ್ನಿವೇಶ” ಎಂದು ರೂಪಿಸಲಾದ ಈ ಹೇಳಿಕೆ ಭಾರತದ ಪ್ರಮುಖ ನಗರಗಳನ್ನು ಹೊಡೆಯುವ ಎಚ್ಚ್ರಿಕೆಗೆ ಇದುವರೆಗೂ ಭಾರತದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ

“ಯಾರಾದರೂ ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡಿದರೆ ಪಾಕಿಸ್ತಾನಕ್ಕೆ ಭಾರತದ ಮೇಲೆ ಎಲ್ಲಿ ಬೇಕಾದರೂ ದಾಳಿ ಮಾಡುವುದನ್ನು ಬಿಟ್ಟು ಬೇರೆ ದಾರಿ ಇರುವುದಿಲ್ಲ”. “ನಾವು ಹಾಗೆ ಮಾಡಬಾರದು ಎಂದಾದರೆ ಪಾಕಿಸ್ತಾನದ ತಂಟೆಗೆ ಅಮೇರಿಕಾ ಬರಬಾರದು ಎಂದಿದ್ದಾರೆ.

ಈ ಹೇಳಿಕೆಗಳು, ವಿಶೇಷವಾಗಿ ಮುಂಬೈ ಮತ್ತು ನವದೆಹಲಿಯ ಉಲ್ಲೇಖ ವ್ಯಾಪಕವಾಗಿ ಹರಡಲು ಪ್ರಾರಂಭಿಸಿದ್ದು ಇದು ಅಂತಹ ವಾಕ್ಚಾತುರ್ಯದ ಪರಿಣಾಮಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ.