ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷರುಗಳ ಸಭೆ

ಬೆಂಗಳೂರು, ಅ. ೨೧- ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್ ಮಟ್ಟದ ೨೬೯ ಅಧ್ಯಕ್ಷರುಗಳು ಕಾರ್ಯಕ್ರಮಕ್ಕೆ ಬೆಂಗಳೂರುನಗರ ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ಭಾರತಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಬೂತ್ ಮಟ್ಟದ ಅಧ್ಯಕ್ಷರುಗಳು ಸಭೆಗೆ ಚಾಲನೆ ನೀಡಿದರು.


ಮಾಜಿ ಪಾಲಿಕೆ ಸದಸ್ಯರುಗಳಾದ ಚಂದ್ರಶೇಖರಯ್ಯ, ರಾಮಪ್ಪ, ಬಿಜೆಪಿ ಪಕ್ಷದ ಪ್ರಮುಖರುಗಳಾದ ನಂಜಪ್ಪ, ರಾಮಪ್ಪ, ಗಂಗಣ್ಣ, ಶಾಮಣ್ಣ ನಿರಜ್ ಕಾಮತ್, ವೇಲು ಮೂರ್ತಿ ವಿನುತಾ ವೆಂಕಟೇಶ್, ಈಶಣ್ಣರವರು ಪಾಲ್ಗೊಂಡಿದ್ದರು.


ಇದೇ ಸಂದರ್ಭದಲ್ಲಿ ಕೆ.ಉಮೇಶ್ ಶೆಟ್ಟಿರವರು ಮಾತನಾಡಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಎಂಬ ಉಜ್ವಲ ದೀಪ ಬೆಳಗಲಿದೆ. ಎಲ್ಲರೂ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ ಎಂದರು.


ಪ್ರಧಾನಿ ನರೇಂದ್ರಮೋದಿರವರು, ಗೃಹ ಸಚಿವರು ಅಮಿತ್ ಷಾರವರು ಬೂತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತನು ಪ್ರಧಾನಿ ಹುದ್ದೆಯನ್ನು ಬಿಜೆಪಿ ಪಕ್ಷದಲ್ಲಿ ಅಲಂಕರಿಸಬಹುದು ಎಂದರು.


ಪಕ್ಷ ಸಂಘಟನೆಗೆ, ಶಕ್ತಿ ತುಂಬಬೇಕು ೨೬೯ ಬೂತ್‌ಗಳಿಗೆ ಅಧ್ಯಕ್ಷರುಗಳನ್ನು ನೇಮಿಸಲಾಗಿದೆ ಮತ್ತು ೧೩ವಾರ್ಡ್ ಗಳಿಗೆ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.


ನಮ್ಮ ಕ್ಷೇತ್ರದ ೨೬೯ಬೂತ್ ಅಧ್ಯಕ್ಷರುಗಳನ್ನು ಮುಂದಿನ ವಾರದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯದ ಉಸ್ತುವಾರಿ ರಾಧಮೋಹನ್ ಅಗರವಾಲ್ ರವರು ನೇರ ಭೇಟಿ ಮಾಡಲಿದ್ದಾರೆ ಎಂದು ಹೇಳಿದರು.