ಕಾರು ಡಿಕ್ಕಿ: ಬೈಕ್ ಸವಾರ ಸಾವು

ಕಲಬುರಗಿ,ಆ.19-ಕಾರು ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಮೃತಪಟ್ಟಿರುವ ಘಟನೆ ಸುಂಟನೂರ ಕ್ರಾಸ್ ಹತ್ತಿರ ನಡೆದಿದೆ.
ಜೆಸ್ಕಾಂ ಕಚೇರಿಯಲ್ಲಿ ಗಣಕಯಂತ್ರ ಡಾಟಾ ಎಂಟ್ರಿ ಕೆಲಸ ಮಾಡುತ್ತಿದ್ದ ತಡಕಲ್ ಗ್ರಾಮದ ಪ್ರಮೋದಕುಮಾರ ಮಳಗಿ ಮೃತಪಟ್ಟವರು.
ಪ್ರಮೋದಕುಮಾರ ಕೆಲಸದ ನಿಮಿತ್ಯ ದಿನಾಲು ತಡಕಲ್ ಗ್ರಾಮದಿಂದ ಕಲಬುರಗಿಗೆ ಬಂದು ಹೋಗುತ್ತಿದ್ದರು. ಆ.18 ರಂದು ಸಹ ಕಲಬುರಗಿಗೆ ಬಂದು ಕೆಲಸ ಮುಗಿಸಿಕೊಂಡು ಮರಳಿ ತಡಕಲ್ ಗ್ರಾಮಕ್ಕೆ ಬೈಕ್ ಮೇಲೆ ಹೋಗುತ್ತಿದ್ದಾಗ ಸುಂಟನೂರ ಕ್ರಾಸ್ ಹತ್ತಿರ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.