ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವು: ಆರೋಪಿಗೆ ಶಿಕ್ಷೆ

ಕಲಬುರಗಿ,ನ.19-ಅತಿ ವೇಗವಾಗಿ ಮತ್ತು ನಿರ್ಲಕ್ಷ ತನದಿಂದ ಕಾರು ಚಲಾಯಿಸಿಕೊಂಡು ಬಂದು ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರನ ಸಾವಿಗೆ ಕಾರಣನಾದ ಆರೋಪಿಗೆ ಅಫಜಲಪುರದ ಜೆಎಂಎಫ್‍ಸಿ ನ್ಯಾಯಾಲಯ ಎರಡು ತಿಂಗಳ ಸಾದಾ ಕಾರಾವಾಸ ಶಿಕ್ಷೆ ಮತ್ತು 10 ಸಾವಿರ ರೂ.ದಂಡ ವಿಧಿಸಿದೆ.
ಅಫಜಲಪುರದ ಲಿಂಬಿತೋಟದ ಸಂತೋಷ ತಂದೆ ಲಕ್ಷ್ಮಣ ದರ್ಗಾಶಿರೂರ ಶಿಕ್ಷೆಗೆ ಗುರಿಯಾದ ಆರೋಪಿ.
2021ರಲ್ಲಿ ಬಸವರಾಜ ತಂದೆ ಉಮಲು ಚವ್ಹಾಣ್ ಎಂಬಾತ ಬೈಕ್ ಮೇಲೆ ಚವಡಾಪೂರದಿಂದ-ದೇವಲಗಾಣಗಾಪೂರ ಮಾರ್ಗವಾಗಿ ಅಂಕಲಗಾ ತಾಂಡಾಕ್ಕೆ ಹೋಗುತ್ತಿದ್ದಾಗ ಚೌಡಾಪುರ ಸೀಮಾಂತರದದಲ್ಲಿ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ಬಗ್ಗೆ ದೇವಲಗಾಣಗಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‍ಐ ಭೀಮರತ್ನ ಮತ್ತು ಸಿಪಿಐ ಜಗದೇವಪ್ಪಾ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಅಫಜಲಪುರ ಜೆಎಂಎಫ್‍ಸಿ ನ್ಯಾಯಾಲದ ದಿವಾಣಿ ಸಿವಿಲ್ ನ್ಯಾಯಾಧೀಶ ಅನೀಲ ಅಮಾಟೆ ಅವರು ಆರೋಪಿಗೆ ಎರಡು ತಿಂಗಳ ಸಾದಾ ಕಾರಾವಾಸ ಶಿಕ್ಷೆ ಮತ್ತು 10 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಜಯಶ್ರೀ ಪಿ ಅವರು ವಾದ ಮಂಡಿಸಿದ್ದರು.