ಬೈಕ್‍ಕಳ್ಳನ ಬಂಧನ: 6 ಬೈಕ್ ವಶ

ಕಲಬುರಗಿ,ಆ. 21: ನಗರದ ವಿವಿಧ ಕಡೆಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆತನಿಂದ 6 ಬೈಕ್‍ಗಳನ್ನು ರಾಘವೇಂದ್ರ ನಗರ ಪೆÇಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೀದರ್ ನಗರದ ಚಿದ್ರಿ ರೋಡ್ ಹುಸೇನಿ ಕಾಲೋನಿ ನಿವಾಸಿ ಗುಲಾಮ ಅಲಿ ಫಾರುದ್ದಿನ್ ಝಾಫ್ರಿ ಬಂಧಿತ ಆರೋಪಿ. ಈತನಿಂದ ವಿವಿಧ ಕಂಪನಿಗಳ 2.75 ಲಕ್ಷ ರೂ. ಮೌಲ್ಯದ 6 ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಡಬರಾಬಾದ್ ಕ್ರಾಸ್ ಸಂತೋಷ ಕಾಲನಿ ರೋಡ್‍ನಲ್ಲಿ ಬೈಕ್‍ನಲ್ಲಿ ಓಡಾಡುತ್ತಿದ್ದ ಈತನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಬೀದರನಲ್ಲಿಯೂ ಬೈಕ್ ಕಳ್ಳತನದ ಪ್ರಕರಣಗಳಿವೆ ಎಂದು ಮೂಲಗಳು ತಿಳಿಸಿವೆ.
ರಾಘವೇಂದ್ರ ನಗರ ಪೆÇಲೀಸ್ ಠಾಣೆ ಪಿಐ ದಿಲೀಪಕುಮಾರ ಸಾಗರ, ಪಿಎಸ್‍ಐ ಸುಭಾಶ್ಚಂದ್ರ, ಬರ್ಮಾ, ಎಎಸ್‍ಐ ಮಲ್ಲಿಕಾರ್ಜುನ ಜಾನೆ ಹಾಗೂಸಿಬ್ಬಂದಿ ಮಲ್ಲನಗೌಡ, ಉಮೇಶ, ಅರೇಶ, ಆತ್ಮಕುಮಾರ, ಶರಣಬಸವ, ಕರಣಕುಮಾರ, ರಾಜಕುಮಾರ, ಬಸವರಾಜ, ಜಾಕೀರ್ ಇಬ್ರಾಹಿಂ ತಂಡ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಗರ ಪೆÇಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ ಶ್ಲಾಘಿಸಿದ್ದಾರೆ.