ಬಿಹಾರ: ಮೋದಿ ಪ್ರಚಾರಕ್ಕೆ ಅಖಾಡ ಸಜ್ಜು

ಪಾಟ್ನಾ,ಅ.೧೯- ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿಯೂ ಎನ್‌ಡಿಎ ಅಧಿಕಾರ ಹಿಡಿಯಬೇಕು ಎನ್ನುವ ಟೊಂಕಕಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಾದ್ಯಂತ ೧೨ ಚುನಾವಣಾ ಸಭೆಗಳು ಮತ್ತು ರ್‍ಯಾಲಿ ನಡೆಸಲು ಉದ್ದೇಶಿಸಿದ್ದಾರೆ


ಮೊದಲ ಹಂತದ ಚುನಾವಣೆ ನವಂಬರ್ ೬ ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ ೨೪ ರಂದು ಚುನಾವಣಾ ಅಖಾಡಕ್ಕೆ ಧುಮುಕುವ ಮೂಲಕ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಲಿದ್ದಾರೆ.


ಅಕ್ಟೋಬರ್ ೨೪ ರಂದು ಸಮಷ್ಟಿಪುರದಲ್ಲಿ ಸಾರ್ವಜನಿಕ ಸಭೆಯೊಂದಿಗೆ ಚುನಾವಣಾ ಸಭೆ ಪ್ರಾರಂಭವಾಗಲಿದ್ದು ಅಕ್ಟೋಬರ್ ೩೦ ರವರೆಗೆ ಮುಂದುವರಿಯಲಿದೆ
ಬಿಹಾರದಲ್ಲಿ ಬಿಜೆಪಿ, ಜೆಡಿಯು ಎಲ್ ಜೆಪಿ, ಹಿಂದೂಸ್ತಾನ್ ಹವಾಮಿ ಪಕ್ಷದ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿದ್ದರೂ ಬಿಜೆಪಿ ಈ ಬಾರಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಹೆಚ್ಚು ಕಡಿಮೆ ಆದರೆ ಸ್ವಂತ ಬಲದೊಂದಿಗೆ ಸರ್ಕಾರ ರಚಿಸುವ ಉದ್ದೇಶ ಹೊಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬಹು ರ್‍ಯಾಲಿಗಳನ್ನು ನಡೆಸಲು ಸಜ್ಜಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಾದ್ಯಂತ ೧೨ ರ್ಯಾಲಿಗಳ ಸರಣಿಯೊಂದಿಗೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ

ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಮಾಹಿತಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರು ೧೨ ಪ್ರಮುಖ ಸಭೆಗಳನ್ನು ನಡೆಸಲಿದ್ದಾರೆ. ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಪ್ರಧಾನಿ ಕಚೇರಿಗೆ ಕಳುಹಿಸಲಾಗಿದೆ. ಹಬ್ಬದ ಸಮಯವನ್ನು ನೋಡಿಕೊಂಡು ಪ್ರಧಾನಮಂತ್ರಿಗಳ ಕಚೇರಿ ಪ್ರಚಾರ ಸಭೆ ನಿಗದಿ ಮಾಡಲಿದೆ ಎಂದಿದ್ದಾರೆ

ನವೆಂಬರ್ ೬ ಮತ್ತು ೧೧ ರಂದು ನಡೆಯಲಿರುವ ಮತದಾನದ ಹಂತಗಳಿಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋಫದಿ ಅವರು ರಾಜ್ಯಾದ್ಯಂತ ೧೨ ಪ್ರಮುಖ ಚುನಾವಣಾ ಸಭೆಗಳನ್ನು ನಡೆಸಲಿದ್ದಾರೆ.. ಬಿಹಾರ ಚುನಾವಣೆಯ ಫಲಿತಾಂಶಗಳು ನವೆಂಬರ್ ೧೪ ರಂದು ಪ್ರಕಟವಾಗಲಿವೆ.

ಪ್ರಮುಖ ನಾಯಕರು ಭಾಗಿ

ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಿರಿಯ ನಾಯಕರು ಡಜನ್ಗಟ್ಟಲೆ ರ್ಯಾಲಿಗಳನ್ನು ನಡೆಸಲು ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ ಚುನಾವಣೆ ನಡೆಸಲು ಎನ್‌ಡಿಎ ಮೈತ್ರಿಕೂಟ ಮುಂದಾಗಿದೆ. ಈ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರ ಹಿಡಿಯುವ ತವಕದಲ್ಲಿದೆ