ಭಾರತ-ಅಮೆರಿಕ ನಡುವೆ ಅತಿ ದೊಡ್ಡ ಒಪ್ಪಂದ

ವಾಷಿಂಗ್ಟನ್,ಜೂ.೨೭:ಭಾರತದೊಂದಿಗೆ ಅತಿ ದೊಡ್ಡ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ಸೂಚನೆ ನೀಡಿದ್ದಾರೆ.


ಇತ್ತೀಚೆಗೆ ಟ್ರಂಪ್ ಅವರು ಚೀನಾದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೆ ಈ ಸೂಚನೆ ಹೊರ ಬಿದ್ದಿದೆ. ಇದರೊಂದಿಗೆ ಉಭಯ ದೇಶಗಳ ನಡುವಣ ಬಹುನಿರೀಕ್ಷಿತ ವ್ಯಾಪಾರ ಒಪ್ಪಂದ ಏರ್ಪಡುವ ಸುಳಿವು ದೊರಕಿದೆ.


ಶ್ವೇತಭವನದಲ್ಲಿಂದು ನಡೆದ ’ಬಿಗ್ ಬ್ಯೂಟಿಫುಲ್ ಬಿಲ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಕೆಲವೊಂದು ಅತ್ಯುತ್ತಮ ಒಪ್ಪಂದಗಳನ್ನು ಹೊಂದಿದ್ದೇವೆ. ಇದು ಬಹುಶಃ ಭಾರತದೊಂದಿಗಿನ ಅತಿ ದೊಡ್ಡ ವ್ಯಾಪಾರ ಒಪ್ಪಂದವಾಗಿರಲಿದೆ ಎಂದು ಹೇಳಿದರು.


ಅಮೆರಿಕದೊಂದಿಗೆ ಮುಂದಿನ ಸುತ್ತಿನ ವ್ಯಾಪಾರ ಮಾತುಕತೆಗಾಗಿ ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್‌ಅಗರ್‌ವಾಲ್, ನಿನ್ನೆ ವಾಷಿಂಗ್ಟನ್‌ಗೆ ಆಗಮಿಸಿದ ನಂತರ ಟ್ರಂಪ್ ಅವರು ಈ ಹೇಳಿಕೆ ನೀಡಿದ್ದಾರೆ.


ಉಭಯ ದೇಶಗಳು ಜು.೯ ರೊಳಗೆ ಒಪ್ಪಂದ ಅಂತಿಮಗೊಳಿಸಲು ಪ್ರಯತ್ನಿಸುತ್ತಿವೆ. ಏ. ೨ ರಂದು ಅಧಿಕ ಸುಂಕ ಘೋಷಿಸಿದ ಬಳಿಕ ಜು. ೯ ರಂದು ತಡೆಹಿಡಿದಿದ್ದರು.
ಇದೇ ಸಂದರ್ಭದಲ್ಲಿ ಚೀನಾದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಆದರೆ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.


ಪ್ರತಿಯೊಬ್ಬರು ಒಪ್ಪಂದಮಾಡಿಕೊಳ್ಳಲು ಬಯಸುತ್ತಾರೆ. ಅಮೆರಿಕ-ಚೀನಾದೊಂದಿಗೆ ಸಹಿ ಹಾಕಿದೆ. ನಿಜಕ್ಕೂ ಇದು ಅತ್ಯುತ್ತಮ ಒಪ್ಪಂದ ಎಂದು ಅವರು ಹೇಳಿದರು.


ಭಾರತದೊಂದಿಗೆ ಅಮೆರಿಕ, ಪ್ರಮುಖ ವ್ಯಾಪಾರ ಒಪ್ಪಂದ ಅಂತಿಮಗೊಳಿಸುವ ಹಂತಕ್ಕೆ ತಲುಪಿದೆ. ಎರಡು ರಾಷ್ಟ್ರಗಳ ನಡುವೆ ಹೊಸ ಆರ್ಥಿಕ ಅವಕಾಶ ತೆರೆಯಬಹುದಾದ “ಬಹಳ ದೊಡ್ಡ ಒಪ್ಪಂದ”ವಾಗಲಿದೆ, “ಪ್ರತಿಯೊಬ್ಬರೂ ಒಪ್ಪಂದ ಮಾಡಿಕೊಳ್ಳಲು ಮತ್ತು ಅದರಲ್ಲಿ ಭಾಗವಹಿಸಲು ಬಯಸುತ್ತಾರೆ ಎಂದು ತಿಳಿಸಿದ್ದಾರೆ.


ಭಾರತದೊಂದಿಗೆ ಕೆಲವು ಉತ್ತಮ ಒಪ್ಪಂದ ಮಾಡಿಕೊಂಡಿದ್ದೇವೆ. ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆ ಇದೆ, ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡ ಬಳಿಕ ಭಾರತದೊಂದಿಗೂ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ


ಭಾರತ-ಅಮೆರಿಕಾ ನಡುವೆ ಡಿಜಿಟಲ್ ವ್ಯಾಪಾರ, ಸುಂಕಗಳು, ಮಾರುಕಟ್ಟೆ ಪ್ರವೇಶ, ಔಷಧಗಳು, ಎಲೆಕ್ಟ್ರಾನಿಕ್ಸ್, ಕೃಷಿ ಮತ್ತು ರಕ್ಷಣಾ ಸಂಬಂಧಿತ ಪೂರೈಕೆ ಸರಪಳಿಗಳಂತಹ ಕ್ಷೇತ್ರಗಳನ್ನು ಒಳಗೊಳ್ಳುವ ನಿರೀಕ್ಷೆಯಿದೆ.ಜೊತೆಗೆ ಕೃಷಿ ಕ್ಷೇತ್ರದಲ್ಲಿಯೂ ಹಲವು ಮಹತ್ವದ ಒಪ್ಪಂದ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.


ಕೃಷಿ ಉತ್ಪನ್ನಗಳ ಮೇಲೆ, ವಿಶೇಷವಾಗಿ ಮೆಕ್ಕೆಜೋಳ ಮತ್ತು ಸೋಯಾಬೀನ್ ಮೇಲಿನ ಸುಂಕ ರಿಯಾಯಿತಿ ಒಂದು ಪ್ರಮುಖ ಅಂಶವಾಗಿದೆ. ಅಮೆರಿಕದ ಕೃಷಿಯಲ್ಲಿ ಪ್ರಚಲಿತದಲ್ಲಿರುವ ಸ್ಥಳೀಯವಾಗಿ ಮಾರ್ಪಡಿಸಿದ ಬೆಳೆಗಳಿಗೆ ತನ್ನ ಮಾರುಕಟ್ಟೆಯನ್ನು ತೆರೆಯುವ ಬಗ್ಗೆ ಭಾರತವು ಜಾಗರೂಕವಾಗಿದೆ ಎಂದು ವರದಿಯಾಗಿದೆ.