
ಹಾನಗಲ್,ಮಾ.೨೪: ಕನ್ನಡಿಗರ ನಿರೀಕ್ಷೆಗಳನ್ನು ರಾಜ್ಯ ಸರಕಾರ ಅರಿತಿದ್ದು, ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ೩೦ ಲಕ್ಷ ರೂ. ವೆಚ್ಚದಲ್ಲಿ ಸಿಸಿರಸ್ತೆ, ಚರಂಡಿ, ಸಿಡಿ ನಿರ್ಮಾಣ, ರಸ್ತೆ ಅಭಿವೃದ್ಧಿ, ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಅವರು ಮಾತನಾಡಿದರು. ಕೋಟೇಶಪ್ಪ ಖಂಡೋಜಿ, ಭರಮಗೌಡ ನಂದಿಹಳ್ಳಿ, ಮಹ್ಮದ್‌ಹನೀಪ್‌ಸಾಬ ನರೇಗಲ್, ಗೌಸ್‌ಮೋದೀನಸಾಬ ಉಪ್ಪುಣಸಿ, ಇಸ್ಮೆöÊಲ್‌ಸಾಬ ಪಾಲ್ಗೊಂಡಿದೆರು.




























