ಬೆಟ್ಟಹಲಸೂರು-ರಾಜಾನುಕುಂಟೆ ರೈಲ್ವೆ ಯೋಜನೆ ಕೈಬಿಡಲು ಒತ್ತಾಯ

ಬೆಂಗಳೂರು.ಜ೩೦: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ರೈಲ್ವೆ ಇಲಾಖೆಯಿಂದ ಯಲಹಂಕ ತಾಲ್ಲೂಕಿನ ಬೆಟ್ಟಹಲಸೂರಿನಿಂದ ರಾಜಾನುಕುಂಟೆಯ ವರೆವಿಗೂ ಪ್ರಸ್ತಾವಿಕ ಸ್ಪೆಷಲ್ ರೈಲು ಯೋಜನೆಗಾಗಿ ಭೂಸ್ವಾಧೀನ ಕೈಬಿಡಿ ಎಂದು ಒತ್ತಾಯಿಸಿದ್ದಾರೆ.


ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಅರಳಾಪುರ ಮಂಜೇಗೌಡರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ,ಅರಳಾಪುರ ಮಂಜೇಗೌಡರವರು ಮಾತನಾಡಿ ಕೇಂದ್ರ ಸರ್ಕಾರ, ರೈಲ್ವೆ ಇಲಾಖೆ ಮೂರ್ಖತನದಿಂದ ಅದೇಶ ಹೊರಡಿಸಿದ್ದಾರೆ. ರೈತನ ಜಮೀನನ್ನು ಏಕಾಏಕಿ ವಶಕ್ಕೆ ತೆಗೆದುಕೊಳ್ಳುವುದು ತಪ್ಪು.


ರಾಜಾನುಕುಂಟೆ ಬೆಟ್ಟಹಲಸೂರು ಭಾಗದಲ್ಲಿ ಸರ್ಕಾರಿ ಜಾಗವಿಲ್ಲ , ಚಿಕ್ಕ, ಚಿಕ್ಕ ಸಾಗುವಳಿ ಮಾಡುವ ರೈತರು ಇದ್ದಾರೆ.ಯೋಜನೆ ಕುರಿತು ಅಧಿಕಾರಿಗಳನ್ನು ಕೇಳಿದರೆ ನಮಗೆ ಗೂತ್ತಿಲ್ಲ ಬಂದ್ದಿದ್ದೇವೆ ಎಂದು ಹೇಳುತ್ತಾರೆ. ಅಕ್ಕಪಕ್ಕದಲ್ಲಿ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಮಾಡುವವರ ಜಾಗವಿದೆ ಅದನ್ನ ಬೇಕಾದರೆ ವಶಕ್ಕೆ ಪಡೆದುಕೊಳ್ಳಿ.
ಬೆಂಗಳೂರುನಗರ ಪ್ರದೇಶದ ನಾಗಿಕರಿಗೆ ಶೇಕಡ ೭೦ರಷ್ಟು ತರಕಾರಿಗಳು ನಮ್ಮ ಭಾಗದಿಂದ ಸರಬರಾಜು ಆಗುತ್ತಿದೆ.ಇದಕ್ಕೂ ಮೀರಿ ರೈಲ್ವೆ ಇಲಾಖೆ ಹಾಗೂ ಅಧಿಕಾರಿಗಳು ಭೂಮಿ ವಶ ಪಡೆಯಲು ಪ್ರಯತ್ನ ಪಟ್ಟರೆ ಉಗ್ರ ಹೋರಾಟ ಮಾಡುತ್ತೇವೆ.ಕೊಡಲೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ರೈತರ ಭೂಮಿ ಜೀವ ಉಳಿಸಿ ಎಂದು ಮನವಿ ಮಾಡುತ್ತೇವೆ ಎಂದು ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬೆಟ್ಟಹಲಸೂರು ನಂಜುಂಡಪ್ಪ ಕಡತನಮಲೆ ರವರು “ಪ್ರಸ್ತಾವಿತ ರೈಲು ಮಾರ್ಗಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ತಮ್ಮ ಯೋಜನೆಯನ್ನು ರೈಲ್ವೆ ಅಧಿಕಾರಿಗಳು ಮುಂದುವರಿಸಿದರೆ ಅನೇಕ ಸಣ್ಣ ಹಾಗೂ ಅತಿ ಸಣ್ಣ ಹಾಗೂ ನೂರಾರು ರೈತರು ತಮ್ಮ ಭೂಮಿಯನ್ನು ಕಳೆದುಕೊಂಡು ಜೀವನೋಪಾಯವನ್ನು ಸಹ ಕಳೆದುಕೊಳ್ಳಬೇಕಾಗುತ್ತದೆ. ಹೆಚ್ಚಿನ ರೈತರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ ಹಾಗೂ ಬೀದಿ ಪಾಲಾಗುತ್ತಾರೆ ಹಾಗೂ ತಮ್ಮ ದಿನನಿತ್ಯದ ತರಕಾರಿ ಹಣ್ಣು ಇದಕ್ಕು ಸಹಾ ಅಲೆಯ ಬೇಕಾಗುತ್ತದೆ.ರಾಜ್ಯದ್ಯಾಂತ ಹಲವು ರೈಲ್ವೆ ಯೋಜನೆಗಳು ಎರಡು ಮೂರು ದಶಕಗಳಿಂದ ಬಾಕಿಯಿದ್ದರೂ, ರೈಲ್ವೆ ಅಧಿಕಾರಿಗಳು ಆ ಯೋಜನೆಗಳನ್ನು ಜಾರಿಗೆ ತರಲು ನಿರಾಸಕ್ತಿ ತೋರುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ,” ಎಂದು ಪ್ರಶ್ನಿಸಿದರು.


ರಾಜ್ಯ ಸಂಚಾಲಕರಾದ ಮಾವಳ್ಳಿಪುರ ಧನರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಟ್ಟ ಹಲಸೂರು ನಂಜುಂಡಪ್ಪ ಹಾಗೂ ರೈತರುಗಳಾದ ಜೀರಿಗೆ ಬಾಬು, ಟಿ.ಪಿ.ಪ್ರಕಾಶ್,ಅಂಬರೀಶ್, ಸನತ್ ಕುಮಾರ್, ಶ್ರೀಮತಿ ಸೌಭಾಗ್ಯಮ್ಮ ರವರು ಭಾಗವಹಿಸಿದ್ದರು.