ಪಟಾಕಿ ಹಚ್ಚುವ ವೇಳೆ ಜಾಗೃತಿ ವಹಿಸಿ

Oplus_16908288

ಕೆ.ಆರ್.ಪುರ,ಅ೨೦- ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಹಚ್ಚುವ ವೇಳೆ ಪೋಷಕರು ಮಕ್ಕಳ ಬಗ್ಗೆ ಜಾಗೃತಿ ವಹಿಸಿಬೇಕು ಎಂದು ಶಾಸಕ ಬಿ.ಎ.ಬಸವರಾಜ ಅವರು ತಿಳಿಸಿದರು.


ಕ್ಷೇತ್ರದ ಚೇಳಕೆರೆಯ ಅರ್ಕಾವತಿ ಬಡಾವಣೆ,ಚೇಳಕೆರೆ ಸೇರಿದಂತೆ ವಿವಿಧ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.


ದೀಪಾವಳಿ ಏಲ್ಲರ ಬಾಳು ಬೆಳಗುವ ಹಬ್ಬವಾಗಿದ್ದು, ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಣೆ ಮಾಡುವಂತೆ ಸಲಹೆ ನೀಡಿದರು.


ಚೇಳಕೆರೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದು, ಗುಣಮಟ್ಟದಿಂದ ಮಾಡುವಂತೆ ಸೂಚನೆ ನೀಡಿದ್ದೆನೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಕ್ಷೇತ್ರದ ಎಸ್.ಸಿ.ಮೋರ್ಚಾ ಅಧ್ಯಕ್ಷ ಸಂಪತ್ ಕುಮಾರ್, ಮುಖಂಡರಾದ ಶ್ರೀನಿವಾಸ್, ಡಿ.ವಿ.ಎನ್.ಮಂಜುನಾಥ, ಕೇಶವ, ಕೃಷ್ಣ ಗೋಪಾಲ್, ಚಂದ್ರು, ಮುನಿರಾಜು, ಶಾಂತರಾಜು, ಮುನಿಸ್ವಾಮಿ, ರವಿ ಇದ್ದರು.