
ಲಕ್ಷೆö್ಮÃಶ್ವರ,ಏ.೨೧: ಜಾತಿ ವ್ಯವಸ್ಥೆ ಹೇರಳವಾಗಿದ್ದ ಸಮಯದಲ್ಲಿ ಬಸವೇಶ್ವರರು ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಿ ಪ್ರತಿಯೊಬ್ಬರೂ ಸಮಾನರು ಎಂಬ ಸಂದೇಶವನ್ನು ಸಾರಿದರು ಎಂದು ತಹಸೀಲ್ದಾರ ಧನಂಜಯ ಎಂ ಹೇಳಿದರು
ಅವರು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತ
ಮುಂದಿನ ವರ್ಷದಿಂದ ಬಸವೇಶ್ವರ ಜಯಂತಿಯನ್ನು ಸಾರ್ವಜನಿಕರು ಜೊತೆಗೂಡಿ ಅದ್ದೂರಿಯಾಗಿ ಆಚರಿಸೋಣ ಬಸವಣ್ಣನವರು ಅನುಭವ ಮಂಟಪದಲ್ಲಿ ಜಾತಿ ಲಿಂಗ ಭೇದ ವಿಲ್ಲದೆ ಪ್ರತಿಯೊಬ್ಬರಿಗೂ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಿದ್ದರು ಎಂದರಲ್ಲದೆ
ಬಸವಣ್ಣನವರ ವಚನಗಳಲ್ಲಿ ಜೀವನದ ಸಾರವಿದ್ದು ಜನರಾಡುವ ಭಾಷೆಯಲ್ಲಿ ವಚನಗಳನ್ನು ಬರೆದು ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಅವುಗಳನ್ನು ಅಸ್ತçವನ್ನಾಗಿ ಮಾಡಿಕೊಂಡಿದ್ದರು ಅವರ ಕಾಯಕವೇ ಕೈಲಾಸ ಅತ್ಯಂತ ಮಾರ್ಮಿಕವಾದದ್ದು ಎಂ ಧನಂಜಯ್ ಹೇಳಿದರು.
ಮುಖಂಡರುಗಳಾದ ಬಸವರಾಜ ಬೆಂಡಿಗೇರಿ, ಚಂಬಣ್ಣ ಬಾಳಿಕಾಯಿ, ಪುರ್ಣಾಜಿ ಕರಾಟೆ, ಪ್ರವೀಣ ಬಾಳಿಕಾಯಿ ಮಾತನಾಡಿದರು.
ಈ ಸಂದರ್ಭದಲ್ಲಿ ಕುಬೇರಪ್ಪ ಮಹಾಂತಶೆಟ್ಟರ ಎಸ್ ಬಿ ಅಣ್ಣಿಗೇರಿ, ಈರಣ್ಣ ಅಂಕಲಕೋಟಿ, ಶರಣು ಗೋಡಿ ಎಂ ಕೆ ಕಳ್ಳಿಮಠ, ನಿಂಗಪ್ಪ ಬನ್ನಿಕೊಪ್ಪ, ಟಾಕಪ್ಪ ಸಾತಪುತೆ, ಬಸವರಾಜ ಮೆಣಸಿನಕಾಯಿ, ಬಸವರಾಜ ಅಣ್ಣಿಗೇರಿ, ಅನಿಲ. ಮುಳಗುಂದ,ಶಿವಯೋಗಿ ಅಂಕಲಕೋಟಿ, ಶಿದ್ದನಗೌಡ ಬಳ್ಳೋಳ್ಳಿ, ವೀರಣ್ಣ ಕಠಾರಿ, ಚನ್ನವೀರಪ್ಪ ದಾನಿ,ದೇವಪ್ಪ ಪೂಜಾರ,ಯೋಗೇಶ ಅಣ್ಣಿಗೇರಿ ವನಿತಾ ವಡಕಣ್ಣವರ,ತಹಸೀಲ್ದಾರ ಕಚೇರಿ ಸಿಬ್ಬಂದಿ ಇದ್ದರು.





















