
ಕಲಬುರಗಿ,ಏ 21: ಜಿಲ್ಲಾ ಮಾದಿಗ ಸಮಾಜದ ವತಿಯಿಂದ ಮಲ್ಲಿಕಾರ್ಜುನ ಜಿನಿಕೇರಿ ಅವರ ನೇತೃತ್ವದಲ್ಲಿ ಸಮಾನತೆಯ ಹರಿಕಾರ, ಜಗಜ್ಯೋತಿ ಬಸವಣ್ಣನವರ ಜಯಂತ್ಯೋತ್ಸವ ಪ್ರಯುಕ್ತ ಕಲಬುರಗಿ ನಗರದಲ್ಲಿ ಡಾ. ಬಾಬು ಜಗಜೀವನ್ ರಾಮ್ ಅವರ ಪುತ್ಥಳಿ ಆವರಣದಿಂದ ಜಗತ್ ವೃತ್ತದವರೆಗೆ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಯಿತು.
ನಂತರ ಮುಖಂಡರು ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು . ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರಾದ ಲಿಂಗರಾಜ ತಾರಫೈಲ್ , ಸುಶೀಲ್ ಕಾಂಬಳೆ , ಹನಮಂತ ತುಮಕೂರ್ , ರಮೇಶ್ ವಾಡೇಕರ್ , ದಶರಥ್ ಕಲಗುರ್ತಿ , ಜಾನಪ್ಪ ಶಿವನೂರ್ , ಬಂಡೇಶ್ ರತ್ನಾಡಗಿ , ದಿಗಂಬರ್ ತ್ರಿಮೂರ್ತಿ , ಕೃಷ್ಣ ತಂಗಡಗಿ, ರಾಜು ಕಟ್ಟಿಮನಿ ,ಪೃಥ್ವಿರಾಜ ಎಸ್ ರಾಂಪುರ , ಪ್ರಕಾಶ್ ಮಾಳಿಗೆ , ಸಚಿನ್ ಕಟ್ಟಿಮನಿ , ನಾಗರಾಜ ಮ್ಯಾತ್ರಿ , ದೇವರಾಜ್ ವಾಳೆಕಾರ್, ಹಾಗೂ ಪ್ರದೀಪ್ ಭಾಚನಳಕರ್ ಸಮಾಜದ ಇನ್ನಿತರರು ಮುಖಂಡರು ಉಪಸ್ಥಿತರಿದ್ದರು





















