
ಬೀದರ್:ಜ.31: ಬಸವಣ್ಣ ವಿಶ್ವದ ಮೊದಲ ಮಹಿಳಾವಾದಿ ಎಂದು ಪದ್ಮಶ್ರೀ ಪುರಸ್ಕøತ ಡಾ. ವಿಜಯಲಕ್ಷ್ಮಿ ದೇಶಮಾನೆ ಬಣ್ಣಿಸಿದರು.
ವಚನ ವಿಜಯೋತ್ಸವ ಅಂಗವಾಗಿ ನಗರದ ಬಸವಗಿರಿಯಲ್ಲಿ ಶುಕ್ರವಾರ ನಡೆದ ಸ್ತ್ರೀ ಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಅಕ್ಕ ಮಹಾದೇವಿ ಅವರಿಂದ ಸ್ಫೂರ್ತಿ ಪಡೆಯಬೇಕು. ರಾಷ್ಟ್ರದ ಶಕ್ತಿಯಾಗಬೇಕು ಎಂದು ಹೇಳಿದರು.
ಆಧ್ಯಾತ್ಮ ಮತ್ತು ವಿಜ್ಞಾನ ಒಟ್ಟಿಗೆ ಹೋಗುತ್ತವೆ. ಆಧ್ಯಾತ್ಮದಿಂದ ಮನಸ್ಸನ್ನು ಗಟ್ಟಿಯಾಗಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಚಿತ್ರದುರ್ಗದ ಬಸವ ತತ್ವ ಚಿಂತಕಿ ಡಿ. ಶಬ್ರಿನಾ ಮಾತನಾಡಿ, ಬಸವಣ್ಣನವರು ಹನ್ನೆರಡನೆ ಶತಮಾನದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಕಲ್ಪಿಸಿದ್ದರು ಎಂದು ಹೇಳಿದರು.
ಬಸವ ತತ್ವ ಬೆಳಕಿನಷ್ಟೇ ಸ್ಪಷ್ಟ. ವಿಶ್ವಮಾನ್ಯವಾದದ್ದು. ಜಾತಿ ಮಾನವ ನಿರ್ಮಿತ. ನಮ್ಮ ಮಕ್ಕಳಿಗೆ ಶರಣ ತತ್ವದ ಅರಿವು ಮೂಡಿಸಿದಾಗ ಸದೃಢ ಸಮಾಜ ಕಟ್ಟಬಹುದಾಗಿದೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಗಂಗಾಂಬಿಕೆ ಅಕ್ಕ ಮಾತನಾಡಿ, ಮಹಿಳೆ ಶಕ್ತಿ ಸ್ವರೂಪಿಣಿಯಾಗಿದ್ದಾಳೆ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ಇದ್ದಾಳೆ ಎಂದು ಹೇಳಿದರು.
ಅನುಭವ ಮಂಟಪದಲ್ಲಿ 36 ಶರಣೆಯರು ಏಕಕಾಲಕ್ಕೆ ವಚನ ಸಾಹಿತ್ಯ ರಚಿಸಿದಂತಹ ಉದಾಹರಣೆ ಜಗತ್ತಿನ ಇತಿಹಾಸದಲ್ಲಿ ಬೇರೆಲ್ಲೂ ಸಿಗದು ಎಂದು ತಿಳಿಸಿದರು.
ಸ್ನೇಹಾ ಭೂಸನೂರ, ಇಂದುಮತಿ ತಾಯಿ ಚಿಟಗುಪ್ಪ, ಸುಮಂಗಲಾ ಅಂಗಡಿ, ಮಲ್ಲಮ್ಮ ಆರ್.ಪಾಟೀಲ ಹಾಗೂ ಉಷಾ ಕನ್ನಾಡೆ ಅವರಿಗೆ ಶರಣ ಸೇವಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಮನದೀಪ್ ಕೌರ್, ರೇಷ್ಮಾ ಕೌರ್, ಮಹಾನಗರ ಪಾಲಿಕೆ ಸದಸ್ಯೆ ಲಕ್ಷ್ಮಿಬಾಯಿ ಹಂಗರಗಿ, ಜಿ.ಪಂ. ಮಾಜಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸುನೀತಾ ಸ್ವಾಮಿ, ಲೀಲಾವತಿ ನಿಂಬೂರೆ, ಸವಿತಾ ನಡಕಟ್ಟಿ, ಮೀನಾಕ್ಷಿ ಸಂಗ್ರಾಮ, ಕೆ.ಎಸ್. ಇನಾಮತಿ ಹುಬ್ಬಳ್ಳಿ, ಮಂಗಲಾ ಪಾಟೀಲ, ಶಕುಂತಲಾ ಬೆಲ್ದಾಳೆ, ನಿರ್ಮಲಾ ಶಿವಣಕರ್, ಜ್ಯೋತಿ ಪಾಟೀಲ ಕಲಬುರಗಿ, ಡಾ. ಶಾರದಾ ಗುದಗೆ, ಡಾ. ಆರತಿ ಕೃಷ್ಣ ಮೂರ್ತಿ, ಗಂಗಮ್ಮ ಸಾವಲೆ, ಭ್ರಮರಾ ಕೊಳ್ಳೂರು, ವಿಜಯಲಕ್ಷ್ಮಿ ಬಿರಾದಾರ ಇದ್ದರು.
ವಚನ ವರ್ಷಿಣಿ ಮಹಿಳಾ ತಂಡದವರು ಸಮೂಹ ಗೀತೆ ಹಾಡಿದರು. ಜ್ಞಾನದೇವಿ ಬಬಚೇಡೆ ಸ್ವಾಗತಿಸಿದರು. ಲಿಂಗಾರತಿ ನಾವದಗೇರೆ ನಿರೂಪಿಸಿದರು.
ನಾಟಕ ಪ್ರದರ್ಶನ : ಅನುಭವ ಮಂಟಪ ಸಂಸ್ಕøತಿ ವಿದ್ಯಾಲಯದ ಮಕ್ಕಳಿಂದ ಶಿವಯೋಗಿ ಸಿದ್ಧರಾಮೇಶ್ವರ ನಾಟಕ ಅದ್ಭುತವಾಗಿ ಮೂಡಿ ಬಂದಿತು. ಪೆÇ್ರ. ಸಿದ್ರಾಮಪ್ಪ ಮಾಸಿಮಾಡೆ, ಸಂಗ್ರಾಮ ಎಂಗಳೆ, ಸುವರ್ಣಾ ಚಿಮಕೋಡೆ, ಶಾಂತಾಬಾಯಿ ಬಿರಾದಾರ, ಸುನೀತಾ ದಾಡಗೆ, ಲಕ್ಷ್ಮಣ ಮೇತ್ರೆ ಹಾಜರಿದ್ದರು.
























