
ಚನ್ನಮ್ಮನ ಕಿತ್ತೂರು-೨೧ ಐತಿಹಾಸಿಕ ಚನ್ನಮ್ಮನ ಕೋಟೆ ಮುಂಭಾಗ ಅರಳಿಕಟ್ಟಿ ಸರ್ಕಲನಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣವರ ೮೯೩ನೇ ಜಯಂತ್ಯೋತ್ಸವ ಅಂಗವಾಗಿ ಬಸವೇಶ್ವರ ಭಾವಚಿತ್ರಕ್ಕೆ ಧಾರವಾಡದ ಅಕ್ಕಮಹಾದೇವಿ ಪೀಠದ ಜ್ಞಾನೇಶ್ವರಿ ಮಾತಾಜಿ ಹಾಗೂ ಮಾತೆ ಚಂದ್ರಮ್ಮ, ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ನಿಕಟಪೂರ್ವ ಬಿಜೆಪಿ ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಶರಣರ ಬಳಗ ಜೊತೆಗೂಡಿ ಜಾತಿ-ಭೇದ ಮರೆತು ರಾಜಕೀಯ ಹೊರಗಿಟ್ಟು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮೆರವಣಿಗೆಗೆÀ ಚಾಲನೆ ನೀಡಿದರು.
ಗುರುವಾರ ಪೇಟೆ ಮಾರ್ಗವಾಗಿ ರಾಷ್ಟಿçÃಯ ಹೆದ್ದಾರಿ ೪ರ ಪಕ್ಕದ ಚನ್ನಮ್ಮನ ವರ್ತುಳ ವರೆಗೆ ಮೆರವಣಿಗೆ ಅಂತ್ಯಗೊAಡಿತು. ಸಾನಿಧ್ಯ ನಿಚ್ಚಣಕಿಯ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮಿಜಿ ವಹಿಸಿಕೊಂಡಿದ್ದರು. ಮೆರವಣಿಗೆಯಲ್ಲಿ ಕಸಾಪ ಅಧ್ಯಕ್ಷ ಡಾ. ಶ್ರೀಕಾಂತ ದಳವಾಯಿ, ದಂತವೈದ್ಯ ಡಾ. ಜಗದೀಶ ಹಾರುಗೊಪ್ಪ, ಶ್ರೀಮತಿ ಉಮಾದೇವಿ ಬಿಕ್ಕಣ್ಣವರ, ಸಂದೀಪ ದೇಶಪಾಂಡೆ, ಉಳವಪ್ಪ ಉಳ್ಳಾಗಡ್ಡಿ, ಪಿಎಸ್‌ಐ ಪ್ರವೀಣ ಗಂಗೋಳ, ಅಶೋಕ ಅಳ್ನಾವರ, ಡಿ.ಆರ್.ಪಾಟೀಲ, ಆಶಪಾಕ ಹವಾಲ್ದಾರ, ಕೃಷ್ಣಾ ಬಾಳೇಕುಂದರಗಿ, ಹಾಲಿ-ಮಾಜಿ ಪಪಂ ಸದಸ್ಯರು, ಪೋಲಿಸ್ ಪೇದೆಗಳು, ಸರ್ವ ರಾಷ್ಟಿçÃಯ ಬಸವದಳದ ಶರಣ-ಶರಣೇಯರು, ಹಾಗೂ ಎಲ್ಲ ಬಸವಪರ ಸಂಘಟಣೆ, ಶರಣ ಬಂದುಗಳು, ವಿವಿಧ ಗ್ರಾಮಗಳ ಶರಣರು ಪಾಲ್ಗೊಂಡಿದ್ದರು. ಮಳೆ ಲೆಕ್ಕಿಸದೇ ಸಹಸ್ರಾರು ಶರಣರ ಬಳಗದ ನಡುವೆ ಮೆರವಣಿಗೆ ಸಾಗಿತು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
.





















