ಬಂಡಿಗಣಿ ಗ್ರಾಮದ ಬಸವ ಗೋಪಾಲ ನೀಲಮಾಣಿಕ ಚಕ್ರವರ್ತಿ ದಾನೇಶ್ವರ ಶ್ರೀಗಳು ವಿಧಿವಶ

ಬಾಗಲಕೋಟೆ: ಡಿ.5:ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಚಕ್ರವರ್ತಿ ಶ್ರೀ ದಾನೇಶ್ವರ ಶ್ರೀಗಳು ಗಂಟಲ ಸಮಸ್ಯೆಯಿಂದ ವಿಧಿವಶರಾಗಿದ್ದಾರೆ.

ಶ್ರೀಗಳು ಗಂಟಲ ಸಮಸ್ಯೆಯಿಂದ ಕಳೆದ ಎರಡು ಮೂರು ತಿಂಗಳದಿಂದ ಬಳಲುತ್ತಿದ್ದರು. ಮಧ್ಯಾನ್ಹ ಗಂಟಲ ಸಮಸ್ಯಯಿಂದ ಉಸಿರಾಟದ ತೊಂದರೆ ಅನುಭವಿಸಿದ ಹಿನ್ನೆಯಲ್ಲಿ ಬೆಳಗಾವಿಯ ಕೆ.ಎಲ್.ಈ ಆಸ್ಪತ್ರೆಗೆ ಧಾಕಲು ಮಾಡಲಾಗಿತ್ತು ಎಂದು ಮಾಹಿತಿ ಲಬ್ಯವಾಗಿದೆ ಆದರೆ ಚಿಕಿತ್ಸೆ ಫಲಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಡಿ.6 ರಂದು ಬೆಳಗ್ಗೆ 6 ಗಂಟೆ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಬಸವ ಗೋಪಾಲ ಮಠದ ಆವರಣದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.

ಸಂಜೆ 4 ಗಂಟೆಗೆ ಗ್ರಾಮದಲ್ಲಿ ಪಾರ್ಥಿವ ಶರೀರ ಮಠದ ಆವರಣದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.