ಬಾನು ಮುಷ್ತಾಕ್ ಬರಹಗಳು ಮಹಿಳಾ ಕುಲಕ್ಕೆ ಸ್ಫೂರ್ತಿ: ಡಾ. ಮಹಾದೇವಿ ಹೆಬ್ಬಾಳೆ

ಬೀದರ:ಜೂ.೨೧: ಅಂತರಾಷ್ಟಿçÃಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರ ಬರಹಗಳಲ್ಲಿ ಮಹಿಳಾ ಸಂವೇದನೆ ಇದೆ. ಬಾನು ಅವರ ಹಸೀನಾ ಮತ್ತಿತರ ಕಥೆಗಳು ಜಾತಿ ಧರ್ಮಗಳಾಚೆ ಸ್ತಿçÃಕುಲಕ್ಕೆ ಸ್ಫೂರ್ತಿಯ ಚಿಲುಮೆಗಳಂತಿವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಮಹಾದೇವಿ ಹೆಬ್ಬಾಳೆ ಪ್ರತಿಪಾದಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಬೀದರ ಹಾಗೂ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬ್ರಿಮ್ಸ್ ಕನ್ನಡ ಸಂಘದ ಸಹಯೋಗದಲ್ಲಿ ಬ್ರಿಮ್ಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ ಅಂತರಾಷ್ಟಿçÃಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆ ಎಲ್ಲಾ ಕಟ್ಟುಪಾಡು, ಸಂಪ್ರದಾಯ ಮತ್ತು ಮೂಢನಂಬಿಕೆಯಿAದ ಹೊರಬರಬೇಕು. ತನಗೂ ಒಂದು ಜೀವನವಿದೆ, ಬದುಕಿದೆ ಎಂದು ಅರ್ಥೈಸಿಕೊಂಡು ಸ್ವತಂತ್ರವಾಗಿ ಬದುಕಬೇಕೆಂದು ಬಾನು ಮುಷ್ತಾಕ್ ಅವರು ತಮ್ಮ ಬರಹದಲ್ಲಿ ತಿಳಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ವಿಶ್ರಾಂತ ಡೀನ್ ಪ್ರೊ. ದೇವಿದಾಸ ತುಮಕುಂಟೆ ಮಾತನಾಡಿ ಮುಷ್ತಾಕ್ ಅವರು ಬರೆದ ಕೃತಿಯನ್ನು ೨೦೨೫ರಲ್ಲಿ ದೀಪಾ ಭಸ್ತಿ ಅವರಿಂದ ಆಂಗ್ಲ ಭಾಷೆಗೆ ಅನುವಾದಿಸಲ್ಪಟ್ಟ ಸಣ್ಣ ಕಥಾಸಂಕಲನ ‘ಹಾರ್ಟ್ ಲ್ಯಾಂಪ್’ಗೆ ಅಂತರಾಷ್ಟಿçÃಯ ಬೂಕರ್ ಪ್ರಶಸ್ತಿ ಲಭಿಸಿದೆ. ಮೂಲತಃ ಹಾಸನ ಜಿಲ್ಲೆಯವರಾದ ಮುಷ್ತಾಕ್ ಅವರು ವಕೀಲೆ, ಸಾಮಾಜಿಕ ಕಾರ್ಯಕರ್ತೆ ಮತ್ತು ಬರಹಗಾರ್ತಿ. ಉರ್ದು, ಹಿಂದಿ, ತಮಿಳು, ಮಲೆಯಾಳಂ, ಆಂಗ್ಲಭಾಷೆಯಲ್ಲಿ ಕೃತಿಗಳು ಹೊರಬಂದಿವೆ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕಿ ಡಾ. ಚಂದ್ರಕಲಾ ಬಿದರಿ ಪ್ರಾಸ್ತಾವಿಕ ಮಾತನಾಡಿ ಬಾನು ಮುಷ್ತಾಕ್ ಅವರ ಜೀವನ ಮತ್ತು ಸಾಧನೆ ಕುರಿತು ಇಂದಿನ ಯುವ ಜನತೆಗೆ ತಿಳಿಸಿಕೊಡಲು ಕಾಲೇಜುಗಳಲ್ಲಿ ಅಕಾಡೆಮಿ ವತಿಯಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಹೃದಯಕ್ಕೆ ತಟ್ಟುವ, ಮನಸ್ಸಿಗೆ ಮುಟ್ಟುವ ಹಸೀನಾ ಮತ್ತು ಇತರೆ ಕಥೆಗಳನ್ನು ಬಾನು ಅವರು ರಚನೆ ಮಾಡಿ ಇಂದಿನ ಸಾಹಿತಿಗಳಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು. ಅನೇಕ ಕಷ್ಟಗಳನ್ನು ಸಹಿಸಿಕೊಂಡು, ಆ ಅನುಭವಗಳನ್ನು ಕಥೆ ಕಾದಂಬರಿ ಮೂಲಕ ಜನತೆಗೆ ತಿಳಿಸಲು ಪ್ರಯತ್ನ ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ರಿಮ್ಸ್ ಪ್ರಭಾರಿ ನಿರ್ದೇಶಕ ಡಾ. ಸುನೀಲ ತಪಸೆ ಮಾತನಾಡಿ ಬಾನು ಅವರು ‘ಹೆಜ್ಜೆ ಮೂಡಿದ ಹಾದಿ, ಬೆಂಕಿ ಮಳೆ, ಎದೆಯ ಹಣತೆ, ಸಫಿರಾ, ಬಡವರ ಮಗಳು ಹೆಣ್ಣಲ್ಲ, ಕುಬ್ರ ಕಾದಂಬರಿ, ಇಬ್ಬನಿಯ ಹಾವು ಲೇಖನಗಳ ಸಂಗ್ರಹ, ಒದ್ದೆ ಕಣ್ಣಿನ ಬಾಗಿನ ಕವನ ಸಂಕಲನ ಹೀಗೆ ಅನೇಕ ಗಟ್ಟಿಸಾಹಿತ್ಯ ರಚನೆ ಮಾಡಿ ಅನೇಕ ರಾಜ್ಯ, ರಾಷ್ಟç ಮತ್ತು ಅಂತರಾಷ್ಟಿçÃಯ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಎಂದರು ಅಭಿಪ್ರಾಯಪಟ್ಟರು.
ಇದೇ ವೇಳೆ ವೇದಿಕೆ ಮೇಲೆ ಸಮುದಾಯ ವೈದ್ಯಶಾಸ್ತç ವಿಭಾಗದ ಮುಖ್ಯಸ್ಥೆ ಡಾ. ಪಲ್ಲವಿ ಕೇಸರಿ, ಕ.ಜಾ.ಪ. ತಾಲೂಕಾಧ್ಯಕ್ಷ ಎಸ್.ಬಿ.ಕುಚಬಾಳ, ಸಂಚಾಲಕ ಅಜೀತ ನೇಳಗೆ ಸೇರಿದಂತೆ ವೈದ್ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬ್ರಿಮ್ಸ್ ಕನ್ನಡ ಸಂಘದ ಸಂಯೋಜಕ ಡಾ. ರಾಜಕುಮಾರ ಹೆಬ್ಬಾಳೆ ನಿರೂಪಿಸಿದರು. ಚಕೋರ ಸಾಹಿತ್ಯ ವಿಚಾರ ವೇದಿಕೆ ಸಂಚಾಲಕಿ ಡಾ. ಮಕ್ತುಂಬಿ ಎಂ. ಸ್ವಾಗತಿಸಿದರು. ಸಮುದಾಯ ವೈದ್ಯಶಾಸ್ತçದ ಸಹಾಯಕ ಪ್ರಾಧ್ಯಾಪಕ ಪ್ರೊ. ಶಶಿಕಾಂತ ಹೊಸದೊಡ್ಡೆ ವಂದಿಸಿದರು.