Home Uncategorized ಬ್ಯಾಂಕ್ ಗಳು ಸಹಕಾರಿ:ಜೋಶಿ

ಬ್ಯಾಂಕ್ ಗಳು ಸಹಕಾರಿ:ಜೋಶಿ


ಧಾರವಾಡ, ಮಾ.೧೬-ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ೮೧೮ನೇ ಶಾಖೆಯನ್ನು ನಗರದಲ್ಲಿ ಆರಂಭಿಸಿದೆ.


ನೂತನ ಶಾಖೆಯನ್ನು ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿ ಮಾತನಾಡಿ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಶಾಖೆಯಿಂದ ಸ್ಥಳೀಯ ಸಮುದಾಯ, ಸಣ್ಣ ಉದ್ದಿಮೆಗಳಿಗೆ ಬ್ಯಾಂಕಿAಗ್ ಸೇವೆಗಳು ಲಭ್ಯವಾಗಲಿವೆ ಎಂದು ಹೇಳಿದರು.


ಶಾಖೆಯ ಹಣಕಾಸಿನ ಒಳಗೊಳ್ಳುವಿಕೆಯ ಕ್ರಮಗಳನ್ನು ಬಲಪಡಿಸುತ್ತವೆ, ಅದರ ಜೊತೆಯಲ್ಲೇ ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ಕೂಡ ನೀಡುತ್ತವೆ” ಎಂದರು.
ಬ್ಯಾAಕ್‌ನ ಎಂಡಿ ಹಾಗೂ ಸಿಇಒ ಅಜಯ್ ಕನ್ವಲ್ ಅವರು ರಾಜ್ಯದಲ್ಲಿ ಬ್ಯಾಂಕ್ ನ ಪ್ರಧಾನ ಕಚೇರಿಯಿದ್ದು,ರಾಜ್ಯದ ವಿಚಾರವಾಗಿ ನಮ್ಮ ನಿರಂತರ ಬದ್ಧತೆಯನ್ನು ತೋರಿಸುವ ಬಗೆಯಲ್ಲಿ ಧಾರವಾಡದ ಶಾಖೆಯನ್ನು ಉದ್ಘಾಟಿಸುತ್ತಿರುವುದು ನಮಗೆ ಹೆಮ್ಮೆ ಅನಿಸುತ್ತಿದೆ ಎಂದರು.


ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ-ಧಾರವಾಡವು ಶೈಕ್ಷಣಿ ಮತ್ತು ಆರ್ಥಿಕ ಕೇಂದ್ರವಾಗಿ ಬಹಳ ಬೇಗನೆ ಬೆಳವಣಿಗೆ ಕಾಣುತ್ತಿದೆ. ಇಲ್ಲಿ ವರ್ತಕರ, ಸಣ್ಣ ಉದ್ದಿಮೆಗಳ ಹಾಗೂ ವೃತ್ತಿಪರರ ಸಮುದಾಯವು ಬಹಳ ಶಕ್ತಿಶಾಲಿಯಾಗಿದೆ ಎಂದು ಹೇಳಿದರು.
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಭಾರತದ ಎಲ್ಲೆಡೆ ಒಟ್ಟು ೧.೨ ಕೋಟಿ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ. ಬಹಳ ವೈವಿಧ್ಯಮಯವಾದ ಸಾಲದ ಉತ್ಪನ್ನಗಳು ಹಾಗೂ ಠೇವಣಿ ಆಯ್ಕೆಗಳು ಬ್ಯಾಂಕ್‌ನಲ್ಲಿ ಲಭ್ಯವಿವೆ. ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಮಹೇಶ್ ಶೆಟ್ಟಿ, ಮಾಜಿ ಮೇಯರ್ ಈರೇಶ್ ಇಂಚಟಗೇರಿ ಅವರಿದ್ದರು.