ಬಗರ್ ಹುಕುಂ ಸಾಗುವಳಿದಾರರ ಜಿಲ್ಲಾ ಸಮಾವೇಶ

ವಿಜಯಪುರ,ಜೂ.13:ಕರ್ನಾಟಕ ಪ್ರಾಂತ ರೈತ ಸಂಘ ಬಗರ್ ಹಕುಂ ಸಾಗುವಳಿದಾರರ ಜಿಲ್ಲಾ ಮಟ್ಟದ ಸಮಾವೇಶ ಕೇಂದ್ರ ಬಸ್ ನಿಲ್ದಾಣ ಬಳಿ ಜಿಲ್ಲಾ ಸಹಕಾರಿ ಸಂಘ ನಿ. ಯೂನಿಯನ್ ಸಭಾಂಗಣದಲ್ಲಿ ಜರುಗಿತು.
ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಅವರು ಸಮಾವೇಶ ಉದ್ಘಾಟಿಸಿ ಮಾತನಾಡಿ, ಬಗರ್ ಹುಕುಂ ಸಾಗುವಳಿದಾರಿಗೆ ಜಿಲ್ಲಾ ಉಸ್ತುವಾರಿ ಸಚಿವÀ ಎಂ.ಬಿ. ಪಾಟೀಲ ಅವರು ಅಕ್ರಮ ಭೂಮಿ ಸಕ್ರಮಗೊಳಿಸಿ ಹಕ್ಕು ಪತ್ರ ವಿತರಿಸಬೇಕು. ಜಿಲ್ಲಾ ತಾಲೂಕ ಗ್ರಾಮಗಳಲ್ಲಿ ಬಡ ಕುಟುಂಬದವರಿಗೆ ನಿವೇಶನ ನೀಡಿ ಹಕ್ಕುಪತ್ರ ವಿತರಿಸಬೇಕು ಎಂದರು.
ಜು. 15ರಂದು ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ಮೂಲಕ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ನಿರ್ದಿಷ್ಟ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಸರ್ಕಾರ ಕೂಡಲೇ ಬಗರ್À ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಿ ಧರಣಿ ಸತ್ಯಾಗ್ರಹ ಮಾಡಲು ಅವಕಾಶ ನೀಡಬಾರದು. ಅರಣ್ಯ ಭೂಮಿ ಸಾಗುವಳಿದಾರರಾದ ಲಕ್ಷಾಂತರ ಬಡವರನ್ನು ಅವರ ಜಮೀನುಗಳಿಂದ ಒಕ್ಕಲೆಬ್ಬಿಸಿ ಬಂಡವಾಳಿಗರಿಗೆ ದಾನ ಕೊಡಲಾಗುತ್ತಿದೆ ಎಂದು ಹೇಳಿದರು.
ಬಡವರು, ದಲಿತರಿಗೆ ಮತ್ತು ಮಹಿಳೆಯರಿಗೆ ನೆರವಾಗದ ಈ ಸರಕಾರಗಳು ಬಂಡವಾಳಿಗರಿಗೆ ಲಕ್ಷಾಂತರ ಕೋಟಿ ರೂಗಳ ಸಹಾಯಧನ ಒದಗಿಸುತ್ತವೆ. ಬಡವರಿಗೆ ಮನೆ ನಿವೇಶನಕ್ಕೆ 5 ಲಕ್ಷ ರೂಪಾಯಿ ನೀಡಬೇಕು ಎಂದರು.
ಜಿಲ್ಲಾ ಅಧ್ಯಕ್ಷ ಅಣ್ಣಾರಾಯ ಇಳಗೇರ, ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ, ಸುರೇಶ. ಜಿ.ಬಿ., ಕಾರ್ಮಿಕ ಮುಖಂಡ ಲಕ್ಷ್ಮಣ ಹಂದ್ರಾಳ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಚಿದಾನಂದ ಬೆಳ್ಳಂದವರ, ಕರ್ನಾಟಕ ಪ್ರಾಂತ ರೈತ ಸಂಘ ರಮೇಶ ಸಾಸಬಾಳ ಮತ್ತಿತರರು ಉಪಸ್ಥಿತರಿದ್ದರು.