Home ಜಿಲ್ಲೆ ಬಾಗಲಕೋಟೆ ಉಪಚುನಾವಣೆ ಘೋಷಣೆ: ನಗರದಲ್ಲಿ ನೀತಿಸಂಹಿತಿ ಜಾರಿ,ರಾಜಕೀಯ ಬ್ಯಾನರ್, ಫ್ಲೆಕ್ಸ್, ಬಂಟಿAಗ್ಸ್ ತೆರವಿಗೆ ಪೌರಾಯುಕ್ತ ಜ್ಯೋತಿಗಿರೀಶ...

ಬಾಗಲಕೋಟೆ ಉಪಚುನಾವಣೆ ಘೋಷಣೆ: ನಗರದಲ್ಲಿ ನೀತಿಸಂಹಿತಿ ಜಾರಿ,ರಾಜಕೀಯ ಬ್ಯಾನರ್, ಫ್ಲೆಕ್ಸ್, ಬಂಟಿAಗ್ಸ್ ತೆರವಿಗೆ ಪೌರಾಯುಕ್ತ ಜ್ಯೋತಿಗಿರೀಶ ಸೂಚನೆ

ಸಂಜೆ ವಾಣಿ ವಾರ್ತೆ,
ಜಮಖಂಡಿ:ಮಾ.೧೬: ಕೇಂದ್ರ ಚುನಾವಣಾ ಆಯೋಗವು ಬಾಗಲಕೋಟೆ ವಿಧಾನಸಭಾ ಸಾಮಾನ್ಯ ಕ್ಷೇತ್ರದ ಉಪಚುನಾವಣೆಯನ್ನು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಇಂದಿನಿAದಲೇ ಮಾದರಿ ನೀತಿಸಂಹಿತಿ ಜಾರಿಯಾಗಿದೆ. ಏಪ್ರಿಲ್ ೯ರಂದು ಮತದಾನ ನಡೆಯಲಿರುವುದರಿಂದ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೆವೆ ಎಂದು ನಗರಸಭೆ ಪೌರಾಯುಕ್ತ ಜ್ಯೋತಿಗಿರೀಶ ಹೇಳಿದರು.

ನಗರ ವ್ಯಾಪ್ತಿಯಲ್ಲಿ ರಾಜಕೀಯ ಮುಖಂಡರು ಹಾಗೂ ಇತರ ಗಣ್ಯರ ಹೆಸರಿನಲ್ಲಿ ಅಳವಡಿಸಲಾದ ಬ್ಯಾನರ್, ಫ್ಲೆಕ್ಸ್ ಮತ್ತು ಬಂಟಿAಗ್ಸ್ ಇದ್ದರೆ ಸಂಬAಧಿಸಿದ ಪಕ್ಷದವರು ತಕ್ಷಣವೇ ತೆರವುಗೊಳಿಸಿಕೊಳ್ಳಬೇಕು ಎಂದು ಸೂಚಿಸಿದರು. ಈಗಾಗಲೇ ನಮ್ಮ ಸಿಬ್ಬಂದಿ ನಗರದಲ್ಲಿರುವ ಬ್ಯಾನರ್ ಹಾಗೂ ಫ್ಲೆಕ್ಸ್ಗಳನ್ನು ತೆರವುಗೊಳಿಸುವ ಕಾರ್ಯವನ್ನು ಆರಂಭಿಸಿದ್ದಾರೆ.

ಉಪಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಯಾವುದೇ ರಾಜಕೀಯ ವ್ಯಕ್ತಿಗಳು ಅಥವಾ ಗಣ್ಯರ ಹೆಸರಿನಲ್ಲಿ ಫ್ಲೆಕ್ಸ್, ಬಂಟಿAಗ್ಸ್ ಅಳವಡಿಸಲು ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಶಾಲಾ ಕಾರ್ಯಕ್ರಮಗಳು ಅಥವಾ ಇತರ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಸಂದರ್ಭದಲ್ಲಿ ಗಣ್ಯರ ಫೋಟೋಗಳನ್ನು ಹೊರತುಪಡಿಸಿ, ನಗರಸಭೆಯ ಅನುಮತಿ ಪಡೆದು ಮಾತ್ರ ಬ್ಯಾನರ್ ಅಳವಡಿಸಬೇಕು. ಯಾವುದೇ ಕಾರ್ಯಕ್ರಮ ನಡೆಸುವ ಮೊದಲು ನಗರಸಭೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಸೂಚನೆ ನೀಡಿದರು.