ಬೇಬಿ ಎಗ್ ಮಸಾಲ

ಬೇಕಾಗುವ ಸಮಾಗ್ರಿಗಳು

*ಮೊಟ್ಟೆ ಗೊಂಚಲು -೧

*ಅಚ್ಚ ಖಾರದ ಪುಡಿ-೧ ಚಮಚ

*ಧನಿಯಾ ಪುಡಿ- ೧ ಚಮಚ

*ಗಸಗಸೆ-೧ ಚಮಚ

*ತೆಂಗಿನಕಾಯಿ ತುರಿ- ೧ ಚಮಚ

*೨ -೨೦೦ ೨.

*ಚಕ್ಕೆ -೨ ಪೀಸ್

*ಲವಂಗ ೨

*ಈರುಳ್ಳಿ ೨ ದಪ್ಪದು

*ತುಪ್ಪ- ೩ ಚಮಚ

ಮಾಡುವ ವಿಧಾನ:

ಪಾತ್ರೆಗೆ ತುಪ್ಪ ಹಾಕಿ. ಬಿಸಿಯಾದ ಮೇಲೆ ಚಕ್ಕೆ, ಲವಂಗ, ಏಲಕ್ಕಿ ಹಾಕಿ ಘಮ ಬರುವವರೆಗೆ ಹುರಿಯಿರಿ. ಇದಕ್ಕೆ ಈರುಳ್ಳಿ, ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಗಸಗಸೆ, ತಂಗಿನಕಾಯಿ ತುರಿಯನ್ನು ಒಂದೊಂದಾಗಿ ಹಾಕಿ ಸ್ವಲ್ಪ ಹುರಿಯಿರಿ. ತಣ್ಣಗಾದ ನಂತರ ರುಬ್ಬಿಕೊಳ್ಳಿ, ಪಾತ್ರೆಗೆ ತುಪ್ಪ ಹಾಕಿ ಬಿಸಿಯಾದ ಮೇಲೆ ಹೆಚ್ಚಿಟ್ಟುಕೊಂಡ ಈರುಳ್ಳಿ, ಮೊಟ್ಟೆ ಗೊಂಚಲು ಹಾಕಿ ಎಲ್ಲವೂ ಬೆರೆತುಕೊಳ್ಳುವಂತೆ ಕಲಸಿ. ಇದಕ್ಕೆ ರುಬ್ಬಿಕೊಂಡ ಮಸಾಲೆ, ನೀರು, ಉಪ್ಪು ಹಾಕಿ ಚೆನ್ನಾಗಿ ಕೈಯಾಡಿಸಿ, ಮುಚ್ಚಳ ಮುಚ್ಚಿ ಹದವಾಗಿ ಬೇಯಿಸಿ. ಈಗ ಬೇಬಿ ಎಗ್ ಮಸಾಲ ರೆಡಿ.