ಸಮಾಜಕ್ಕೆ ಸರ್ವಸ್ವ ಅರ್ಪಿಸಿದ ಮಹಾನ್ ಚೇತನ ಬಾಬಾ ಸಾಹೇಬರು

ಕೆಂಭಾವಿ:ಡಿ.8:ಡಾ. ಬಿ.ಆರ್.ಅಂಬೇಡ್ಕರ್ ಅವರ 69 ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಿಂದ ಮಹಾ ನಾಯಕ ಮೂರ್ತಿಯ ವರೆಗೆ ಮೇಣದ ದೀಪದೊಂದಿಗೆ ಕಾಲನಡಿಗೆ ಜಾಥಾ ಮಾಡಲಾಯಿತು.

ಈ ಸಂದರ್ಭದಲ್ಲಿ ದಲಿತ ಮುಖಂಡ ಬಸವಣ್ಣಪ್ಪ ಆರ್ ಮಾಳಳ್ಳಿಕರ್ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಸಮಾನತೆ, ನ್ಯಾಯ ಹಾಗೂ ಮಾನವೀಯ ಮೌಲ್ಯಗಳಿಗಾಗಿ ತಮ್ಮ ಸಂಪೂರ್ಣ ಬದುಕನ್ನೇ ಅರ್ಪಿಸಿದ ಮಹಾನ್ ಚೇತನ, ಅವರ ಆದರ್ಶಗಳು ನಮ್ಮ ಬದುಕಿನೂದ್ದಕ್ಕೂ ಅಳವಡಿಸಿಕೊಳ್ಳಬೆಕು ಎಂದರು. ಕಾರ್ಯಕ್ರಮದಲ್ಲಿ ಶಿವಶರಣಪ್ಪ ಮಾಳಳ್ಳಿಕರ್, ಮಾದೇವಪ್ಪ ಶರಣಪ್ಪ ಬಸರಿಗಿಡ, ಅಯ್ಯಣ್ಣ ಮಾಳಳ್ಳಿಕರ್, ರಾಯಪ್ಪ ಬಸರಿಗೇಡ, ಮರೇಪ್ಪ ಕಟ್ಟಿಮನಿ, ಪರಶುರಾಮ ಮಾಳಳ್ಳಿಕರ್, ಲಕ್ಷ್ಮಣ್ ಬಾವಿಮನಿ, ಮಲ್ಲಿಕಾರ್ಜುನ ಕಟ್ಟಿಮನಿ, ಸಿದ್ದಾರ್ಥ ಮಾಳಳ್ಳಿಕರ್, ಹಣಮಂತ ಬೊಮ್ಮನಹಳ್ಳಿ, ಪ್ರಕಾಶ ಮಾಳಳ್ಳಿಕರ್, ಬಾಲರಾಜ ಬಸರಿಗಿಡ, ಮಲ್ಲಿಕಾರ್ಜುನ ಸೀನಪ್ಪ ಮನಿ, ಶಿವರಾಜ ಯಮನೂರ ಇತರರು ಭಾಗವಹಿಸಿದ್ದರು.