
ಕಲಬುರಗಿ ಅ. 10: ನಗರದ ಕೇಂದ್ರ ಬಸ್ ನಿಲ್ದಾಣ ಎದುರು ಸೆಂಟರ್ ಮಾಲ್ ಮತ್ತು ಸಂಜೆವಾಣಿ ಪತ್ರಿಕೆ ಕಾರ್ಯಾಲಯದ ಸಮೀಪ ನಿರ್ಮಿಸಿರುವ ಕಟ್ಟಡದಲ್ಲಿ ಆಕ್ಸಿಲೈಫ್ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮವನ್ನು ಅ.12ರಂದು ಬೆಳಿಗ್ಗೆ 11.25ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ವಸಂತಾ ಗ್ರೂಪ್ ಆಫ್ ಇನ್‍ಸ್ಟಿಟ್ಯೂಶನ್ಸ್ ಅಧ್ಯಕ್ಷ ಚಂದ್ರಕಾಂತ ಗಾದಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 100 ಹಾಸಿಗೆಯುಳ್ಳ ಈ ಆಸ್ಪತ್ರೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಉದ್ಘಾಟಿಸುವರು. ಉದ್ಘಾಟನಾ ಸಮಾರಂಭದಲ್ಲಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಶರಣಬಸಪ್ಪ ದರ್ಶನಾಪುರ, ರಹೀಂಖಾನ್, ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯ್‍ಸಿಂಗ್ ಅವರು ಸೇರಿದಂತೆ ಸಂಸದರು, ಶಾಸಕರು, ಗಣ್ಯರು ಪಾಲ್ಗೊಳ್ಳುವರು ಎಂದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪ್ರಿಯಾ ಗಾದಗಿ ಮೋದಿ ಮತ್ತು ಡಾ.ಅನ್ಮೋಲ ಮೋದಿ
ಅವರು ಮಾತನಾಡಿ, ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್, ಸರ್ಜರಿ, ಸ್ತ್ರೀ ರೋಗ, ಮಕ್ಕಳ ವಿಭಾಗ, ಮೂಳೆರೋಗ, ನರರೋಗ, ಗ್ಯಾಸ್ಟ್ರೋ,ಚರ್ಮರೋಗ ಸೇರಿ ಎಲ್ಲಾ ತರಹದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸಾ ಸೌಲಭ್ಯ ಇವೆ. 16 ಹಾಸಿಗೆಯ ಐಸಿಯು, ಎನ್‍ಐಸಿಯು, ಮಾಡ್ಯುಲರ್ ಒಟಿ ಸೌಕರ್ಯ ಲಭ್ಯ ಇದೆ. ಸಿಟಿಸ್ಕ್ಯಾನ್ ಸಹಿತ ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆಗಳು ಒಂದೇ ಕಟ್ಟಡದಲ್ಲಿ ಮಾಡಲಾಗುವುದು ಎಂದರು.
ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡಲಾಗುವುದು. ಆಯುಷ್ಮಾನ್ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ನಗದು ರಹಿತ ಸ್ಕೀಮ್‍ಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಸಂತಾ ಗ್ರೂಪ್ ಆಫ್ ಇನ್‍ಸ್ಸಿಟ್ಯೂಶನ್ಸ್ ಕಾರ್ಯದರ್ಶಿ ಪೆÇ್ರ. ಚಿನ್ನಮ್ಮ ಗಾದಗಿ, ದಿನೇಶ್ ಮೈನಾಳಕರ್ ಉಪಸ್ಥಿತರಿದ್ದರು.