
ಕಲಬುರಗಿ:ಜ.31:ಅಫಜಲಪೂರ ತಾಲೂಕಿನ ಚಿಣಮಗೇರಾದ ಶ್ರೀ ಮಹಾಂತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಸರಕಾರದ ನೆಹರು ಯುವ ಕೇಂದ್ರ, ಕಲಬುರಗಿ, ಮಹಾಂತ ಜ್ಯೋತಿ ವಿದ್ಯಾಪೀಠ (ರಿ) ಮಹಾಂತಪೂರದ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಮಹಾಂತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು, ಮಹಾಂತಪೂರ ಹಾಗೂ ಸ್ವಾಮಿ ವಿವೇಕಾನಂದ ಯುವಕ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಮೇರಾ ಭಾರತ ಮೇರಾ ವೋಟ ಕುರಿತ ಜಾಗೃತಿ ಜಾಥಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಮಹಾಂತೇಶ್ವರ ಮಠದ ಪೂಜ್ಯರಾದ ಶ್ರೀ ಷ. ಬ್ರ. ವೀರಮಹಾಂತ ಶಿವಾಚಾರ್ಯರರು ದೇಶದ ಅಭಿವೃದ್ದಿಯಲ್ಲಿ ಯುವಕ ಪಾತ್ರ ಮಹತ್ವದಾಗಿದ್ದು 18 ವರ್ಷÀ ತುಂಬಿದ ಯುವಕರು ತಮ್ಮ ಮತವನ್ನು ಯೋಗ್ಯ ಅಭ್ತರ್ಥಿಗೆ ಚಲಾಯಿಸಿ ಉತ್ತಮ ಸರಕಾರ ರಚಿಸಲು ಅಣಿಯಾಗಬೇಕು ಎಂದು ಮತದಾನದ ಮಹತ್ವ ಕುರಿತು ತಿಳಿ ಹೇಳಿದರು. ನೆಹರು ಯುವ ಕೇಂದ್ರ ಕಲಬುರಗಿಯ ಅಧಿಕಾರಿಯಾದ ಶ್ರೀ ಮಯೂರಕುಮಾರ ಇವರು ಮುಖ್ಯ ಅಥಿಥಿಗಳಾಗಿ ಆಗಮಿಸಿ ಸಂವಿಧಾನವು ನಮಗೆ ನೀಡಿದ ಮತದಾನದ ಹಕ್ಕನ್ನು ಯಾವುದೆ ಆಸೆ ಆಮಿಷಗಳಿಗೆ ಬಲಿಯಾಗದೆ ನಿರ್ಬಿತವಾಗಿ ಚಲಾಯಿಸ ಬೇಕು ಎಂದು ಕರೆ ನೀಡಿದರು.
ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ಸುರೇಶ ಎಸ್. ರಾಠೋಡ ಅವರು ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ನಂತರ ಪೂಜ್ಯ ಶ್ರೀ. ವೀರಮಹಾಂತ ಶಿವಾಚಾರ್ಯರರು, ಹಾಗೂ ಗ್ರಾಮ ಪಂಚಾಯತ ಸದಸ್ಯರಾದ ಪ್ರಕಾಶ ಗೋಡೆನ ಅವರು ಹಸಿರು ದ್ವಜ ತೋರಿಸುವ ಮೂಲಕ ಮೇರಾ ಭಾರತ ಮೇರಾ ವೋಟ ಜಾಗೃತಿ ಜಾಥಾ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚನಬಸಯ್ಯ ಜಿ. ಹಿರೇಮಠ, ಕಾಲೇಜಿನ ಪ್ರಾಚಾರ್ಯರರಾದ ಶ್ರೀ ದಯಾನಂದ ವ್ಹಿ. ಬಂದರವಾಡ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀ ಬಾಳಪ್ಪ ಜರಕುಂಟೆ, ಎನ್. ಎಸ್. ಅಧಿಕಾರಿಗಳಾದ ಶ್ರೀ ವೀರಣ್ಣ ಡಿ. ಪಟ್ಟಣ ಕಾಲೇಜಿನ ಉಪನ್ಯಾಸಕರಾದ ಶ್ರೀ ಲಕ್ಷ್ಮೀಕಾಂತ ಹಿರೇಗೌಡ, ನವಾಜ ಷರೀಪ ಮುಲ್ಲಾ, ಮಹಾಂತೇಶ ಪಾಟೀಲ, ರಾಜೇಂದ್ರ ನಾಟೀಕಾರ ಮಹಾಂತೇಶ ಕಲಶೆಟ್ಟಿ ಹಾಗೂ ದೈಹಿಕ ಉಪನ್ಯಾಸಕರಾದ ಅಜಿತಕುಮಾರ ಭಕರೆ ಸ್ವಾಮಿ ವಿವೇಕಾನಂದ ಯುವಕ ಮಂಡಳಿಯ ಸದಸ್ಯರು ಹಾಗೂ ನೇಹರುಇ ಯುವ ಕೇಂದ್ರ ಸ್ವಯಂ ಸೇವಕರಾದ ರಾಜಕುಮಾರ ಅವರಾದ À್ವಈ ಜಾಥಾ ಕಾರ್ಯಕ್ರಮದಲ್ಲಿ ಹಾಜರಿದ್ದರು.
























