
ಗುರುಮಠಕಲ್: ಮಾ.೧೮:ಜಿಲ್ಲಾಡಳಿತ ಜಿಲ್ಲಾ,ಪಂಚಾಯತ್, ತಾಲೂಕು ಪಂಚಾಯತ್ ಗುರುಮಠಕಲ್ ಹಾಗೂ ಸ್ವರ ಸಾಮ್ರಾಟ್ ಸಂಗೀತ ಸಾಮಾಜಿಕ ಹಾಗೂ ಸಂಸ್ಕೃತಿಕ ಕಲಾ ಸಂಸ್ಥೆ (ರಿ) ಯಾದಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ೨೦೨೫-೨೬ನೇ ಸಾಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಕುರಿತು.ತಮಟೆ ಬಾರಿಸುವ ಮೂಲಕ ಬೀದಿನಾಟಕ ಹಾಗೂ ಜಾನಪದ ಸಂಗೀತ ಕಲಾ ತಂಡದಿAದ ಪ್ರದರ್ಶನ ಮಾಡುವ ಮೂಲಕ ಜಾಗೃತಿ ಮೂಡಿಸಲಾಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಚಂಡ್ರಿಕಿ ಗ್ರಾಮ ಪಂಚಾಯತ್ ಕರವಸೂಲಿಗರಾದ ಖಾಜಾ ಹುಸೇನ್ ಮಾತನಾಡಿ, ಸಾರ್ವಜನಿಕರು ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶರಣು ಎಸ್ ನಾಟೇಕರ್,ಸಂಸ್ಥೆಯ ಹಿರಿಯ ಕಲಾವಿದರಾದ ಶಾಂತಯ್ಯ ಮಠಪತಿ ಉಡಚಣ, ಸುಭಾಷ್ ದೋರನಹಳ್ಳಿ, ಜಯಶ್ರೀ ವಿ ಗುತ್ತೆದಾರ, ಶಿವಮ್ಮ ಮಾಳೂರು, ಮಲ್ಲಿಕಾರ್ಜುನ ಕಾಗಿ ಸೇರಿದಂತೆ ಗ್ರಾಮಸ್ಥರು ಇದ್ದರು.




























