Home ಕ್ರೈಂ ಸುದ್ದಿಗಳು ಅಟೋ ಪಲ್ಟಿ ಪ್ರಕರಣ: ಚಾಲಕನ ಶವ ಪತ್ತೆ : ಅಪಘಾತವೇ? ಕೊಲೆಯೇ? ಕುಟುಂಬದ ಸಂಶಯ

ಅಟೋ ಪಲ್ಟಿ ಪ್ರಕರಣ: ಚಾಲಕನ ಶವ ಪತ್ತೆ : ಅಪಘಾತವೇ? ಕೊಲೆಯೇ? ಕುಟುಂಬದ ಸಂಶಯ

ಯಾದಗಿರಿ:ಮಾ.23: ಜಿಲ್ಲೆಯ ಯಾದಗಿರಿ ತಾಲೂಕಿನ ಹೊಸಳ್ಳಿ ಗ್ರಾಮದ ಸಮೀಪ ಅಟೋ ಪಲ್ಟಿಯಾಗಿ ಚಾಲಕ ಮೃತಪಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವ ಘಟನೆ ಹಲವಾರು ಅನುಮಾನಗಳಿಗೆ ಕಾರಣವಾಗಿದ್ದು, ಅಪಘಾತದ ಹಿಂದೆ ಇನ್ನೇನಾದರೂ ಅಂಶಗಳಿವೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಮೃತ ವ್ಯಕ್ತಿಯನ್ನು ಯಾದಗಿರಿ ತಾಲೂಕಿನ ಚಾಮನಳ್ಳಿ ತಾಂಡಾ ನಿವಾಸಿ ಸಾಗರ (28) ಎಂದು ಗುರುತಿಸಲಾಗಿದೆ. ನಿನ್ನೆ ಊರಿನಿಂದ ಹೊರಟಿದ್ದ ಸಾಗರ ಮನೆಗೆ ವಾಪಸ್ಸಾಗಿರಲಿಲ್ಲ. ಇಂದು ಹೊಸಳ್ಳಿ ಗ್ರಾಮದ ಸಮೀಪದಲ್ಲಿ ಪಲ್ಟಿಯಾದ ಅಟೋ ಬಳಿ ಅವರ ಶವ ಪತ್ತೆಯಾಗಿದೆ.

ಘಟನೆಯ ಬಗ್ಗೆ ಕುಟುಂಬಸ್ಥರು ಗಂಭೀರ ಸಂಶಯ ವ್ಯಕ್ತಪಡಿಸಿದ್ದು, ಇದು ಕೇವಲ ಅಪಘಾತವಲ್ಲ, ಏನಾದರೂ ದುಷ್ಕøತ್ಯ ಅಥವಾ ಕೊಲೆ ನಡೆದಿರಬಹುದೇ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಸಾವಿನ ಹಿನ್ನೆಲೆ ಅನುಮಾನಾಸ್ಪದವಾಗಿರುವುದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಸುದ್ದಿ ತಿಳಿಯುತ್ತಿದ್ದಂತೆ ಯಾದಗಿರಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಎಲ್ಲಾ ಆಯಾಮಗಳನ್ನೂ ಗಮನದಲ್ಲಿಟ್ಟುಕೊಂಡು ತನಿಖೆ ಮುಂದುವರೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಘಟನೆ ಯಾದಗಿರಿ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮರಣದ ನಿಖರ ಕಾರಣ ಪತ್ತೆಯಾಗಲು ಮರಣೋತ್ತರ ಪರೀಕ್ಷೆಯ ವರದಿ ಪ್ರಮುಖವಾಗಲಿದೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.

ಈ ಘಟನೆ ಗ್ರಾಮದಲ್ಲಿ ಆತಂಕ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದು, ಸತ್ಯಾಂಶ ಬಹಿರಂಗವಾಗಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.