ದಿ.೧೦ ರಂದು ಅಥಣಿ ಬಂದ್”ಅಥಣಿ ಜಿಲ್ಲೆಗಾಗಿ ಹೋರಾಟ ತೀವ್ರಗೊಳಿಸಲು ನಿರ್ಧಾರ : ಶಿವಬಸವ ಸ್ವಾಮೀಜಿ

ಅಥಣಿ : ಡಿ.೮:ಸರ್ಕಾರ ಅಥಣಿ ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಆಗ್ರಹಿಸಿ. ನಮ್ಮ ಹೋರಾಟವನ್ನು ತೀವ್ರಗೊಳಿಸಲು ಇದೇ ದಿ. ೧೦ ಬುಧುವಾರದಂದು ಅಥಣಿ ಬಂದಗೆ ಕರೆ ನೀಡಲಾಗಿದೆ ಎಂದು ಗಚ್ಚಿನ ಮಠ ಶಿವಬಸವ ಸ್ವಾಮೀಜಿ ಹೇಳಿದರು.
ಅವರು ಅಥಣಿ ಜಿಲ್ಲಾ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಗಚ್ಚಿನ ಮಠದ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಅಥಣಿ ಜಿಲ್ಲೆಯಾಗಬೇಕು ಜನಸಾಮಾನ್ಯರಿಗೆ ಉಪಯೋಗವಾಗುತ್ತದೆ ಎಂಬ ಉದ್ದೇಶದಿಂದ ಹಲವಾರು ವರ್ಷಗಳಿಂದ ಹೋರಾಟವನ್ನು ಮಾಡುತ್ತಿದ್ದೇವೆ. ಆದರೆ ಅಥಣಿ ಜಿಲ್ಲೆ ಕೂಗು ಅದು ಹಾಗೆ ಕನಸಾಗೆ ಉಳಿಯುತ್ತಿದೆ. ಎಂದು ವಿಷಾದಿಸಿದರು.
ನಮ್ಮ ಜನಪ್ರತಿನಿಧಿಗಳು ಉದ್ಯಮಿಗಳು ವರ್ತಕರು ಎಲ್ಲ ನಾಗರಿಕರು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಎಲ್ಲರೂ ಸೇರಿ ಅಥಣಿ ಜಿಲ್ಲೆಯಾಗುವವರೆಗೆ ಹೋರಾಟ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಅಥಣಿ ಜಿಲ್ಲೆ ಘೋಷಣೆ ಆಗುವವರೆಗೆ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಹೋರಾಟ ಮಾಡೋಣ ಎಂದು
ಶಿವಬಸವ ಸ್ವಾಮೀಜಿ ಕರೆ ನೀಡಿದರು.
ಇಂದು ಕೊಟ್ಟಲಗಿಯಿಂದ ಬೆಳಗಾವಿಗೆ ಹೋಗಬೇಕಾದರೆ ಎರಡು ನೂರು ಕಿಮೀ ದೂರ ಇರುವುದರಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆ ಆಗುತ್ತಿದೆ ಜನಸಾಮಾನ್ಯರ ನೋವು ಅರ್ಥ ಮಾಡಿಕೊಂಡು ನಾವು ಅಥಣಿ ಜಿಲ್ಲೆಯ ಆಗಬೇಕು ಎನ್ನವ ಉದ್ದೇಶ ಇಟ್ಟುಕೊಂಡು ಹೋರಾಟವನ್ನು ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ ಈ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ. ಇದೆ ದಿ. ೧೦ ರಂದು ಬುದುವಾರ ಅಥಣಿ ಬಂದಗೆ ಕರೆ ನೀಡಲಾಗಿದೆ. ಇದರಲ್ಲಿ ತಾಲೂಕಿನ ಎಲ್ಲ ಭಾಂದವರು ಈ ಹೋರಾಟದಲ್ಲಿ ಧುಮುಕಬೇಕು ಈ ಹೋರಾಟದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ನಮ್ಮ ಹಕ್ಕು ಸಿಗುವರಿಗೆ ಹೋರಾಟ ಮಾಡೋಣ ಶ್ರೀ ಶಿವಯೋಗಿ ಮುರುಗೇಂದ್ರ ಸ್ವಾಮೀಜಿಗಳ ಆಶೀರ್ವಾದದಿಂದ ಅಥಣಿ ಜಿಲ್ಲೆಯಾಗಲಿ ಜಿಲ್ಲಾ ಮಟ್ಟದಲ್ಲಿ ಸಿಗುವಂತ ಎಲ್ಲ ಸೌಲಭ್ಯಗಳು ಜನಸಾಮಾನ್ಯರಿಗೆ ಇಲ್ಲೇ ಸಿಗುವಂತಾಗಲಿ ಎಂದರು.
ಆನAತರ ಅಥಣಿ ಜಿಲ್ಲಾ ಹೋರಾಟ ಸಮಿತಿಯ ಪ್ರಶಾಂತ್ ತೋಡಕರ ಮಾತನಾಡಿ ದಿ. ೧೦ ರಂದು ಅಥಣಿ ಸಂಪೂರ್ಣ ಬಂದ್ ಮಾಡಲು ಇಂದು ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ನಮ್ಮ ನ್ಯಾಯತವಾದ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಸರ್ಕಾರಿ ಕಚೇರಿ ಗಳಿಗೆ ಮುತ್ತಿಗೆ ಹಾಕಲಾಗುವುದು ಆದ್ದರಿಂದ ಎಲ್ಲರೂ ಜಾತ್ಯತೀತವಾಗಿ ಪಕ್ಷಾತೀತವಾಗಿ ಎಲ್ಲ ಸಮಾಜ ಬಾಂಧವರು ಭಾಗವಹಿಸುವ ಮೂಲಕ ಈ ಹೋರಾಟಕ್ಕೆ ಹೆಚ್ಚಿನ ಶಕ್ತಿ ತುಂಬಬೇಕು ಹೋರಾಟಕ್ಕೆ ಕೈಜೋಡಿಸಬೇಕು ಈ ಹೋರಾಟ ನಮಗಾಗಿ ಅಲ್ಲದಿದ್ದರೂ ನಮ್ಮ ಮುಂದಿನ ಭಾವಿ ಮಕ್ಕಳಿಗಾಗಿ ಎನ್ನುವ ಸಂಕಲ್ಪವಿದೆ. ಪ್ರತಿ ಬಾರಿ ನಮಗೆ ಅನ್ಯಾಯವಾಗುತ್ತಿದೆ. ನಮ್ಮ ಶಕ್ತಿ ಪ್ರದರ್ಶನ ಸರ್ಕಾರ ಮಟ್ಟದಲ್ಲಿ ವಿಧಾನಸಭೆಯಲ್ಲಿ ಪ್ರತಿಧ್ವನಿಸುವಂತಾಗಬೇಕು ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ನಮ್ಮ ಹಕ್ಕನ್ನು ಪಡೆಯೋಣ ಎಂದರು.
ಈ ವೇಳೆ ಆನಂದ ಟೊಣಪೆ. ಪ್ರಮೋದ ಬಿಳ್ಳೂರ. ರವಿ ಭಡಕಂಬಿ. ಉದಯ ಮಾಕಾಣಿ. ಶಬ್ಬೀರ್ ಸಾತಬಚ್ಚೆ. ಮಂಜು ಹೊಳಿಕಟ್ಟಿ. ಗಿರೀಶ ದಿವಾನಮಳ್ಳ. ಮಹಾಂತೇಶ ಮಾಳಿ. ಸಂಪತಕುಮಾರ ಶೆಟ್ಟಿ. ಮಿತೇಶ ಪಟ್ಟಣ. ಆಕಾಶ ನಂದಗಾAವ. ಶಶಿಧರ ಬರ್ಲಿ. ಪುಟ್ಟು ಹಿರೇಮಠ. ಮನ್ಸೂರ್ ಬಾಗವಾನ. ಅಪ್ಪು ಪೂಜಾರಿ ಸೇರಿದಂತೆ ಸಂಘಟನೆಗಳ ಪದಾಧಿಕಾರಿಗಳು ರೈತ ಮುಖಂಡರು ಉಪಸ್ಥಿತರಿದ್ದರು