೧೩೦ ಕೋಟಿ ರೂ. ಸ್ವತ್ತು ವಶ

ಬಿಡಿಎ ಕಾರ್‍ಯಾಚರಣೆ

ಬೆಂಗಳೂರು, ಫೆ. ೬- ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಜೆ.ಪಿ.ನಗರ ೯ನೇ ಫೇಸ್ ಬಡಾವಣೆಯ ಆಲಹಳ್ಳಿ ಗ್ರಾಮದ ಸರ್ವೆ ನಂ.೨೦ ರಲ್ಲಿರುವ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿ.ಡಿ.ಎ) ಇಂದು ನಡೆಸಿತು.


ಕಾರ್ಯಾಚರಣೆಯಲ್ಲಿ ಒಟ್ಟು ೦೩-೦೦ ಎಕರೆ ವಿಸ್ತೀರ್ಣದ ಅಂದಾಜು ಮೊತ್ತ ರೂ.೧೩೦.೦೦ ಕೋಟಿ ಮೌಲ್ಯದ ಸ್ವತ್ತನ್ನು ಪ್ರಾಧಿಕಾರ ತನ್ನ ವಶಕ್ಕೆ ಪಡೆದು ಕೊಂಡಿದೆ.


ಈ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪಆರಕ್ಷಕ ಅಧೀಕ್ಷಕರು, ವಿಶೇಷ ಕಾರ್ಯನಿರತ ಪಡೆ ಮತ್ತು ಜಾಗೃತ ದಳ, ವಲಯ ಆಯುಕ್ತರು (ದಕ್ಷಿಣ ವಲಯ) ಅಭಿಯಂತರ ಅಧಿಕಾರಿ, ಕಾರ್ಯಪಾಲಕ ಅಭಿಯಂತರರು (ದಕ್ಷಿಣ) ಸಹಾಯಕ ಕಾರ್ಯಪಾಲಕ ಅಭಿಯಂತರರು (ದಕ್ಷಿಣ), ಸಹಾಯಕ ಅಭಿಯಂತರರು ಮತ್ತು ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನೆರವೇರಿಸಲಾಯಿತು ಎಂದು ಬಿ.ಡಿ.ಎ, ಅಧಿಕಾರಿಗಳು ತಿಳಿಸಿದ್ದಾರೆ.