
ಕಲಬುರಗಿ,ಮಾ.12-ಚಿತ್ರಕಲಾಕೃತಿಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತವೆ, ತನ್ಮೂಲಕ ಮಾನವನ ಜೀವನವನ್ನು ಉತ್ತಮ ಪಡಿಸುತ್ತವೆ. ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ ಅವರು ಹೇಳಿದರು.
ಶನಿವಾರ ನಗರದ ‘ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆಟರ್uಟಿಜeಜಿiಟಿeಜ ಗ್ಯಾಲರಿ’ಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಏರ್ಪಡಿಸಿದ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಮಾನ್ಯವಾಗಿ ಬಹಳಷ್ಟು ಜನ ಕಲಾವಿದರು ಆಥರ್uಟಿಜeಜಿiಟಿeಜಕ ಸಂಕಷ್ಟವನ್ನು ಎದುರಿಸುತ್ತಿರುತ್ತಾರೆ. ಎಲ್ಲೋ ಒಬ್ಬಿಬ್ಬರು ಕಲಾಕೃತಿಗಳ ಮಾರಾಟದಿಂದ ಆರ್ಥಿಕವಾಗಿ ಸೂಸ್ಥಿತಿಯಲ್ಲಿರಬಹುದು; ಕಲಾ ಪರಿಕರಗಳನ್ನು ತಯಾರಿಸಿ ಮಾರುವವರು ಯಾವಾಗಲೂ ಶ್ರೀಮಂತರಾಗುತ್ತಾರೆ, ಆದರೆ ಕಲಾವಿದರೇಕೆ ಶ್ರೀಮಂತರಾಗಬಾರದು ಕಲಾವಿದರು ಮೊದಲು ಆರ್ಥಿಕವಾಗಿ ಚೇತರಿಸಕೊಳ್ಳುವಂತಾಗಬೇಕು. ಹಾಗೆ ಆಗಬೇಕೆಂದರೆ ಜನರು ಕಲಾವಿದರಿಂದ ಕಲಾಕೃತಿಗಳನ್ನು ಕೊಳ್ಳವಂತಾಗಬೇಕು, ತನ್ಮೂಲಕ ಕಲಾವಿದರನ್ನು ಉತ್ತೇಜಿಸಬೇಕು’ ಎಂದು ವಿಶ್ಲೇಷಿಸಿದರು. ‘ಕಲಾವಿದರು ವಿಲಕ್ಷಣ ಪ್ರವೃತ್ತಿಯವರಾಗಿದ್ದು, ವ್ಯವಹಾರ ದೂರವಾದ ಸ್ವಭಾವದವರಾಗಿರುತ್ತಾರೆ ಮತ್ತು ಪ್ರಾಮಾಣಿಕತೆ, ನಿಷ್ಠೆ ಮತ್ತು ಬದ್ಧತೆಯುಳ್ಳವರು ಆಗಿರುತ್ತಾರೆ ಮತ್ತು ಸಂಸ್ಕøತಿಯ ಬಗ್ಗೆ ಅಪಾರವಾದ ಅಭಿಮಾನ ಮತ್ತು ಪ್ರೀತಿಯುಳ್ಳವರೂ ಆಗಿರುತ್ತಾರೆ’ ಎಂದು ವಿವರಿಸುತ್ತ, ಕಲಾಪ್ರದರ್ಶನದಲ್ಲಿ ಭಾಗವಹಿಸಿದ್ದ ಕಲಾವಿದರನ್ನು ಪ್ರಶಂಸೆ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ಕೇಂದ್ರೀಯ ವಿಶ್ವವಿದ್ಯಾಲಯದ ಮಾನವಿಕ ಮತ್ತು ಭಾಷಾ ನಿಕಾಯದ ಪೆÇ್ರ. ವಿಕ್ರಮ ವಿಸಾಜಿ ಅವರು ಮಾತನಾಡುತ್ತ ‘ಕಲಾವಿದರ ಮನಸ್ಸು ಬಹಳ ಸೂಕ್ಷಷ್ಮವಾಗಿರುತ್ತದೆ, ಅವರು ಪ್ರತಿಯೊಂದನ್ನು ಭಾವುಕ ಆಯಾಮಗಳಿಂದ ನೊಡಿ ತಮ್ಮ ಕಲಾಕೃತಿಗಳ ಮೂಲಕ ಅಭಿವ್ಯಕ್ತಿಸುತ್ತಾರೆ’ ಎಂದರು. ಕಲಬುರಗಿಯು ಕಲಾವಿದರ ತಾಣವಾಗಿದ್ದು ಇಲ್ಲಿ ಕಲೆಯ ಹದಗೊಂಡ ನೆಲ ಇದೆ, ಅಂತೆಯೇ ಕೇಂದ್ರೀಯ ವಿವಿಯಲ್ಲಿ ಕೂಡ ಒಂದು ಸ್ವತಂತ್ರ ವಿಭಾಗ ಆರಂಭವಾಗಿದೆ ಮತ್ತು ಅಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ವಿದ್ಯಾರ್ಥಿಗಳು ಬಂದು ಕಲಿಯುತ್ತಲಿದ್ದಾರೆ. ಅವರೆಲ್ಲ ರಚಿಸಿದ ಕಲಾಕೃತಿಗಳು ಶ್ರೇಷ್ಠ ಮಟ್ಟದವುಗಳಾಗಿದ್ದು ಈ ಕಲಾ ಪ್ರದರ್ಶನದಿಂದ ಅವರೆಲ್ಲರಿಗೂ ಉತ್ತೇಜನ ದೊರಕಿದಂತಾಗಿದೆ’, ಎಂದು ವಿಶ್ಲೇಷಿಸಿದರು.
ಕಲಾ ಪ್ರದರ್ಶನದ ಸಂಯೋಜಕ ಹಾಗೂ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಬಂಟನೂರ ಪ್ರಾಸ್ತಾವಿಕ ಮಾತುಗಳಲ್ಲಿ; ‘ಕೆಂದ್ರೀಯ ವಿವಿಯಲ್ಲಿ 2019ರಲ್ಲಿ ಸಂಗೀತ ಮತ್ತು ಲಲಿತಕಲಾ ವಿಭಾಗ ಆರಂಭವಾಗಿದು, 2024-25ನೇ ಸಾಲಿನಿಂದ ಚಿತ್ರಕಲಾ ಸ್ನಾತಕೋತ್ತರ ಪದವಿಯನ್ನು(ಎಂ.ವಿ.ಎ) ಆರಂಭ ಮಾಡಲಾಗಿದೆ. ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕಾಗಿ ಅನೇಕ ಕಲಾ ಚಟುವಟಿಕೆಗಳನ್ನು ಆಯೋಜಿಸುತ್ತಾ ಬರಲಾಗಿದ್ದು ಪ್ರಸ್ತುತ ಕಲಾ ಪ್ರದರ್ಶನವನ್ನು ವಿಭಾಗದ ವಿದ್ಯಾರ್ಥಿಗಳು, ಪಿ.ಎಚ್.ಡಿ. ವಿದ್ವಾಂಸರು ಮತ್ತು ಅಧ್ಯಾಪಕರು ಸೇರಿ ಹಮ್ಮಿಕೊಳ್ಳಲಾಗಿದೆ’ ಎಂದರು. ಈ ಪ್ರದರ್ಶನವು ವಿಶ್ವ ವಿದ್ಯಾಲಯದ ಆವರಣದ ಹೊರಗೆ ಆಯೋಜಿಸಿರುವ ಮೊದಲ ವಾರ್ಷಿಕ ಕಲಾ ಪ್ರದರ್ಶನವಾಗಿ ಮಹತ್ವ ಪಡೆದಿದೆ’ ಎಂದು ವಿವರಿಸಿದರು.
ಪ್ರಸ್ತುತ ಕಲಾ ಪ್ರದರ್ಶನದಲ್ಲಿ ಶಿವಾನಿ ರಾವತ್, ಸಿತಾಂಶು ಮುಖಜರ್, ಗೀತಾ ಲೆಂಕೆ, ಬಿ.ಜಿ. ಲೈಂಗಡೊ ಮೊಪಲಾಂಗ್, ದಕ್ಷಿತಾ ಲಾಂಜೆವರ, ಡಿ. ಶ್ವೇತಾ, ಕುಮಾರ ಮುರಳಿ, ನಯನಾ ಬಿ., ಪ್ರಸಾಂತ ಕುವರ, ಅಶ್ವಿನಿ ಕಲ್ಯಾಣಿ, ರಮೇಶ್ ಮೋಥುಕುರಿ, ವಿನಯಕುಮಾರ ರುದ್ರಸ್ವಾಮಿಮಠ ಅವರ ವರ್ಣಚಿತ್ರಗಳು ಹಾಗೂ ಶಿವಾನಂದ ಬಂಟನೂರ ಅವರ ಶಿಲ್ಪಕಲಾಕೃತಿಗಳು ಪ್ರದರ್ಶನಗೊಂಡಿವೆ.
ಕಲಾವಿದರಾದ ವಿ .ಬಿ. ಬಿರಾದಾರ, ರಾಜಶೇಖರ ಎಸ್., ಡಾ. ಹಣಮಂತ ಮಂತಟ್ಟಿ, ಮತ್ತು ಗೌತಮ ಅಂದಾನಿ, ಡಾ. ಅಶೋಕ ಶೆಟಕಾರ, ಬಿ ಎನ್ ಪಾಟೀಲ, ದೌಲತ್ರಾಯ ದೇಸಾಯಿ, ಬಾಬುರಾವ್, ಡಾ. ಆಕಾಶ್, ಡಾ. ರವಿಕಿರಣ ನಾಕೋಡ, ಗುರುಲಿಂಗ ಅರಳಿ, ಅಣ್ಣಾರಾಯ, ಪ್ರಿ. ಶೇಷರಾವ್ ಬಿರಾದಾರ, ಸೂರ್ಯಕಾಂತ ನಂದೂರ, ಬಸವರಾಜ ಕಮಾಜಿ, ಗೌರೀಶ ಅಂದಾನಿ, ನಾರಾಯಣ ಎಂ. ಜೋಶಿ,ಬಿ.ಎಂ ರಾವುರ, ಚಂದ್ರಹಾಸ ಜಾಲಿಹಾಳ, ಪ್ರಶಾಂತ ಗುಂಬಳಾಪುರ ಮೊದಲಾದವರು ಉಪಸ್ತಿತರಿದ್ದರು.
ಸಂಗಯ್ಯ ಹಳ್ಳದಮಠ ಪ್ರಾರ್ಥನ ಗೀತೆ ಹಾಡಿದರು. ಶಿವಾನಿ ರಾವತ್, ಡಿ. ಶ್ವೇತಾ ಹಾಗೂ ರಾಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

























