ಸಂಧಿವಾತ ರೋಗ ನಿರ್ವಹಣೆ ಮತ್ತು ಸವಾಲುಗಳು

ಪ್ರಸ್ತುತದ ಕೋವಿಡ್-೧೯ ಆರೋಗ್ಯ ಕ್ಷೇತ್ರದ ಚಿತ್ರಣ ಮತ್ತು ಲೆಕ್ಕಾಚಾರವನ್ನು ಭಾರೀ ಪ್ರಮಾಣದಲ್ಲಿ ಬದಲಾಯಿಸಿದೆ. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಸಂಧಿವಾತ ಆರ್ಥಿರಿಟೀಸ್,ಲುಪುಸ್, ವಾಸ್ಕುಲಿಟಿಸ್, ಪ್ರೈರೋಡರ್ಮಾ, ಸೊರಿಯಾಟಿಕ್ ಆರ್ಥಿರಿಟೀಸ್‌ನಿಂದ ಬಳಲುತ್ತಿರುವವರು ಸಾಕಷ್ಟು ವಿಶಿಷ್ಟವಾದ ಸವಾಲುಗಳನ್ನು ಎದುರಿಸುವಂತಾಗಿದೆ.

ಈ ಸಂಧಿವಾತ ಇರುವ ರೋಗಿಗಳಲ್ಲಿ ಕೋವಿಡ್-೧೯ ಸೋಂಕಿನ ಫಲಿತಾಂಶಗಳು, ಕೋವಿಡ್ ಸೋಂಕು ಮತ್ತು ಲಸಿಕೆ ಮೇಲೆ ಸಂಧಿವಾತದ ಔಷಧಿಗಳ ಪ್ರಭಾವದ ಬಗ್ಗೆ ಸಾಮಾಜಿಕ ಮಾಧ್ಯಮ ತಪ್ಪು ಗ್ರಹಿಕೆ ಮತ್ತುತಪ್ಪಾದ ಅಂಶಗಳನ್ನು ಬಿತ್ತರ ಮಾಡುತ್ತಿದೆ. ಸಂಧಿವಾತ ಕಾಯಿಲೆಯನ್ನು ಹೊಂದಿರುವ ರೋಗಿಗಳಲ್ಲಿ ಕೋವಿಡ್-೧೯ಅನ್ನು ಸಂಕುಚಿತಗೊಳಿಸುವುದರಿಂದ ಎದುರಾಗುವ ಕೆಟ್ಟಫಲಿತಾಂಶಗಳ ಬಗ್ಗೆ ಅನೇಕ ಕ್ಲಿನಿಕಲ್ ಸಂಶೋಧನಾ ಅಧ್ಯಯನಗಳಮೂಲಕತಿಳಿಸಲಾಗಿದೆ.

ದೀರ್ಘಕಾಲೀನಸಂಧಿವಾತದಿಂದಗೆ ಬಳಲುತ್ತಿರುವ ರೋಗಿಗಳು ಕೋವಿಡ್-೧೯ ಸಾಂಕ್ರಾಮಿಕದ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಲಾಕ್‌ಡೌನ್, ಆಸ್ಪತ್ರೆಗಳನ್ನು ಮುಚ್ಚಿರುವುದು ಮತ್ತುಕ್ಲಿನಿಕ್‌ಗಳಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ನೀಡದಿರುವುದು, ಸಾರಿಗೆ ವ್ಯವಸ್ಥೆ ಕೊರತೆ ಇರುವುದು, ಆನ್‌ಲೈನ್ ಅಥವಾ ಟೆಲಿ ಕನ್ಸಲೇಷನ್ ಬಗ್ಗೆ ಹೆಚ್ಚಿನ ಅರಿವು ಇಲ್ಲದಿರುವುದು, ಇಂಟರ್‌ನೆಟ್ ಸೇವೆ ಕಳಪೆಯಾಗಿರುವುದು, ನಿಗದಿಯಂತೆ ಆಸ್ಪತ್ರೆಗಳಿಗೆ ತಪಾಸಣೆಗೆ ಹೋಗಲು ಭಯ ತುವುದು, ತಮ್ಮರೋಗದ ಬಗ್ಗೆ ಫಾಲೋ-ಅಪ್ ಮಾಡುವಲ್ಲಿ ಮತ್ತು ಔಷಧಿ ತೆಗೆದುಕೊಳ್ಳುವುದರಿಂದ ಹಿಂದೇಟು ಹಾಕುವುದು ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಎದುರಿಸುತ್ತಾರೆ.ನಮ್ಮರೋಗಿಗಳಲ್ಲಿ ಗಮನಾರ್ಹವಾದ ಪ್ರಮಾಣದ ಅಗತ್ಯವಿರುವ ಭೌತಚಿಕಿತ್ಸೆಯಂತಹ ಸಂಬಂಧಿತ ಸೇವೆಗಳಿಗೆ ಇದು ಅನ್ವಯವಾಗುತ್ತದೆ. ಇಂಡಿಯನ್ ಸಿಸ್ಟಾಮಿಕ್ ಪ್ರೈರೋಸಿಸ್ ರಿಜಿಸ್ಟ್ರಿಯ ಸೈರೋಡರ್ಮಾ ರೋಗಿಗಳ ಇತ್ತೀಚಿನ ಅಧ್ಯಯನದಲ್ಲಿ ಶೇ.೯೨.೩ ರಷ್ಟು ರೋಗಿಗಳು ತಮ್ಮನಿಗದಿತ ಹೊರರೋಗಿಗಳನೇಮಕಾತಿಗಳನ್ನು ತಪ್ಪಿಸಿಕೊಂಡಿದ್ದಾರೆ ಮತ್ತು ಶೇ.೨೨.೩ ರಷ್ಟು ರೋಗಿಗಳು ತಮ್ಮ ಔಷಧಿಗಳನ್ನು ಬಿಟ್ಟಿದ್ದಾರೆ ಎಂಬುದನ್ನು ಗಮನಿಸಲಾಗಿದೆ. ಈ ಸಮೀಕ್ಷೆಯ ಪ್ರಕಾರ ಶೇ.೨೨.೩ ರಷ್ಟು ರೋಗಿಗಳ ಕುಟುಂಬ ಸದಸ್ಯರು ಉದ್ಯೋಗವನ್ನೂ ಕಳೆದುಕೊಂಡಿದ್ದಾರೆ.

ಮಕ್ಕಳನ್ನು ಹೆರುವ ಗುಂಪಿನ ಹೆಚ್ಚು ಮಹಿಳೆಯರು ಈ ಸಂಧಿವಾತದಿಂದ ಬಳಲುವುದರಿಂದ ಗರ್ಭಧಾರಣೆ ಮತ್ತು ಪ್ರಸವಪೂರ್ವ ಆರೈಕೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಕೋವಿಡ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಇದು ಸವಾಲಾಗಿ ಪರಿಣಮಿಸಿದೆ. ಇದರ ಜತೆಗೆ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರುವ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ.ಇದುಅವರನ್ನು ಹೆಚ್ಚು ಅಪಾಯಕ್ಕೀಡಾಗುವಂತೆ ಮತ್ತು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ಕೋವಿಡ್-೧೯ ಸಾಂಕ್ರಾಮಿಕ

ಸಂದರ್ಭದಲ್ಲಿ ಸಂಧಿವಾತದಿಂದ ಬಳಲುತ್ತಿರುವ ರೋಗಿಗಳು ತಮ್ಮ ನಿಗದಿತಮತ್ತುನಿರ್ದಿಷ್ಟಔಷಧಿಗಳನ್ನು ಪಡೆದುಕೊಳ್ಳುವುದು ಕಷ್ಟಕರವಾಗಿದೆ. ಹೈಡೋಕ್ಲೋರೋಕ್ವೆನ್ ಸಲ್ವೇಟ್ (ಎಚ್‌ಸಿಕ್ಯೂಎಸ್) ಅನ್ನು ಲುಪುಸ್ ಮತ್ತು ಸಂಧಿವಾತ ಆರ್ಥಿರಿಟಿಸ್ ರೋಗಿಗಳು ನಿಯಮಿತವಾಗಿ ಬಳಸುತ್ತಾರೆ.ಸಾಂಕ್ರಾಮಿಕದಮೊದಲ ಅಲೆಯ ವೇಳೆ ಎಚ್‌ಸಿಕ್ಯೂಎಸ್ ಕೋವಿಡ್-೧೯ಗೆ ಚಿಕಿತ್ಸೆ ಮತ್ತು ರೋಗನಿರೋಧಕದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪರಿಣಾಮ ಆರ್ಥಿರಿಟಿಸ್ ರೋಗಿಗಳಿಗೆ ಅತ್ಯಂತ ಅಗತ್ಯವಿರುವ ಔಷಧವಾಗಿರುವ ಈಎಚ್‌ಸಿಕ್ಯೂಎಸ್ ಪೂರೈಕೆಯಲ್ಲಿ ಭಾರೀ ಕೊರತೆ ಕಂಡುಬರುತ್ತಿದೆ. ಇದರಿಂದಾಗಿ ರೋಗ ಉಲ್ಬಣಗೊಳ್ಳುತ್ತಿದೆ. ಪ್ರಸ್ತುತ ತಲೆದೋರಿರುವ ಅಲೆಯಲ್ಲಿ ಟೊಸಿಲಿಝುಮಾಬ್ ಎಂಬ ಮತ್ತೊಂದು ಔಷಧಕ್ಕೆ ಮಹತ್ವ ನೀಡಲಾಗುತ್ತಿದೆ. ಇದನ್ನು ಸಂಧಿವಾತ ಆರ್ಥಿರಿಟಿಸ್,ಮಕ್ಕಳಲ್ಲಿನಆರ್ಥಿರಿಟಿಸ್ ಮತ್ತು ಇನ್ನೊಂದು ರೋಗವಾದ ಟೆಂಪೋರಲ್ ಆರ್ಥಿರಿಟಿಸ್ ಚಿಕಿತೆ-ಬಳಸಲಾಗುತ್ತದೆ. ಸಾಧಾರಣ ಶ್ವಾಸಕೋಶ ಸಂಬಂಧಿರೋಗದಿಂದ ಬಳಲುತ್ತಿರುವ ಕೋವಿಡ್ ರೋಗಿಗಳ ಚಿಕಿತ್ಸೆಗೆ ಈ ಟೊಸಿಲಿಝುಮಾಬ್ ಬಳಸಬಹುದೆಂದು ಶಿಫಾರಸು ಮಾಡಲಾಗಿದೆ.

ಇದರಿಂದಾಗಿ ಈ ಟೊಸಿಲಿಝುಮಾಬ್ ಔಷಧಿಗೆ ಬೇಡಿಕೆ ಹೆಚ್ಚಾಗಿ, ಕೊರತೆ ಉಂಟಾಗುತ್ತಿದೆ.ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಮತ್ತು ಟೊಸಿಲಿಝುಮಾಬ್‌ಗೆ ಬೇಡಿಕೆ ಹೆಚ್ಚಾಗುತ್ತಿದ್ದು,ಔಷಧಿಯ ಕೊರತೆ ಸೃಷ್ಟಿಯಾಗಿದೆ. ಮತ್ತೊಂದು ಆರ್ಥಿರಿಟಿಸ್‌ಗೆ ಔಷಧವೆಂದರೆ ಬೆರಿಸಿಟಿನಿಬ್ .ಇದನ್ನು ಕೋವಿಡ್ ಸೋಂಕಿತರಚಿಕಿತ್ಸೆಗೆ ಬಳಸಲಾಗುತ್ತಿದೆ. ಈಹಿನ್ನೆಲೆಯಲ್ಲಿ ಆರ್ಥಿರಿಟಿಸ್‌ನಿಂದ ಬಳಲುತ್ತಿರುವ ರೋಗಿಗಳ ಚಿಕಿತೆ-ಗಾಗಿ ಔಷಧವನ್ನು ಖರೀದಿಸಲು ಸಾಧ್ಯವಾಗದ ಪರಿಸ್ಥಿತಿ ಬಂದಿದೆ. ಈ ಎರಡೂ ಜೆನರಿಕ್ ಅಲ್ಲ ಮತ್ತು ಭಾರತದಲ್ಲಿ ಇವುಗಳ ಉತ್ಪಾದನೆಯಾಗುತ್ತಿಲ್ಲದ ಕಾರಣದಿಂದ ವಿದೇಶಗಳಿಂದ ರಫ್ತು ಮಾಡಿಕೊಳ್ಳಲಾಗುತ್ತಿದೆ. ಇದರ ಪರಿಣಾಮ ಔಷಧಗಳ ಲಭ್ಯತೆ ಕಷ್ಟವಾಗುತ್ತಿದೆ.

ದೀರ್ಘಕಾಲದ ಸಂಧಿವಾತ ಹೊಂದಿರುವ ಮಹಿಳೆಯರು ತಮ್ಮ ದೈನಂದಿನ ಕೆಲಸಗಳನ್ನುನಿರ್ವಹಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುವ ಜಾಯಿಂಟ್ ಡಿಫಾರ್ಮಿಟಿಸ್ ಅನ್ನು ವಿಕ್ರಂ ಹಾಸ್ಪಿಟಲ್ ನ ಡಾ.ರಮೇಶ್ ಹೊಂದಿರಬಹುದು. ಅದರಂತೆ ಅಸಮರ್ಪಕವಾಗಿ ನಿಯಂತ್ರಿಸಲ್ಪಟ್ಟ ಕಾಯಿಲೆ ಇರುವವರು ನಿರಂತರ ನೋವನ್ನು ಅನುಭವಿಸುತ್ತಾರೆ ಎಂದು ಜೋಯಿಸ್ ತಿಳಿಸಿದ್ದಾರೆ.

ಪ್ರಸ್ತುತ ಸಾಂಕ್ರಾಮಿಕ ಈ ಸಂದರ್ಭದಲ್ಲಿ ನಮಗಿರುವ ಒಂದೇ ಒಂದು ಆಶಾಕಿರಣವೆಂದರೆ ಲಸಿಕಾಕರಣ. ಸಂಧಿವಾತದಿಂದ ಬಳಲುತ್ತಿರುವವರು ಲಸಿಕೆಯನ್ನು ಪಡೆದುಕೊಳ್ಳುವ ವಿಚಾರದಲ್ಲಿ ಅಲ್ಲಲ್ಲಿ ಅನುಮಾನಗಳು ಮೂಡಿದ್ದವು. ಆದರೆ, ಅಮೆರಿಕನ್ ಕಾಲೇಜ್ ಆಫ್ ಹೆಮಟೋಲಾಜಿಯು ಸಂಧಿವಾತ ಇರುವವರು ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳುವುದು ಸುರಕ್ಷಿತ ಎಂದು ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ಸಂಧಿವಾತದಿಂದ ಬಳಲುತ್ತಿರುವವರು ಲಸಿಕೆಯನ್ನು ಪಡೆದುಕೊಳ್ಳುವುದು ಸೂಕ್ತಮತ್ತು ಸುರಕ್ಷಿತವಾಗಿದೆ.