
ಕಲಬುರಗಿ,ಅ.18: ನಗರದ ಆರಾಧನಾ ಪದವಿ ಪೂರ್ವ ಕಾಲೇಜು ವತಿಯಿಂದ ತಾಲೂಕಿನ ಪಟ್ಟಣ ಗ್ರಾಮದಲ್ಲಿ ಎನ್‍ಎಸ್‍ಎಸ್ ಘಟಕದ ವತಿಯಿಂದ ನಡೆಯುತ್ತಿರುವ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಜರುಗಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಮುಖಂಡ ಅರುಣ್ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಉಪಾಧ್ಯಕ್ಷ ಭೀಮಶಂಕರ್ ಪರಿಸ್ತಿ ಆಗಮಿಸಿದರು. ಪಟ್ಟಣ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮಾಪಣ್ಣ ಜಿರೋಳಿ,ಗ್ರಾಪಂ ಸದಸ್ಯ ರಮೇಶ್ ಶಿಲ್ಡ್, ಹಾಗೂ ಡಿಎಸ್‍ಎಸ್ ಅಧ್ಯಕ್ಷ ಸಂಜೀವ , ಆರಾಧನಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಚೇತನ್ ಕುಮಾರ ಗಾಂಗಜಿ, ಉಪನ್ಯಾಸಕರಾದ ಮಹಾದೇವಪ್ಪ ಕುಂಬಾರ್, ಶಂಕರ್ ಬಂಡಗರ್, ರೇವಣಸಿದ್ದಪ್ಪ ಇವಣಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ಕಾಶಿನಾಥ್ ಪಾಟೀಲ್ ಮಾತನಾಡಿ ಶಿಬಿರದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಹಾಗೂ ಶಿಬಿರದಲ್ಲಿ ರುಚಿಶುಚಿ ಊಟ ತಯಾರಿಸಿದ ಕಾಲೇಜಿನ ಆಯಮ್ಮ ಕಸ್ತೂರಬಾಯಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿ ಗಣೇಶ್ ಸಾವಳಗಿ ನಡೆಸಿಕೊಟ್ಟರು ಪ್ರಾರ್ಥನಾ ಗೀತೆಯನ್ನು ವಿದ್ಯಾರ್ಥಿನಿ ಲಕ್ಷ್ಮಿ , ಸ್ವಾಗತವನ್ನು ಸಮರ್ಥ್ ನಡೆಸಿಕೊಟ್ಟರೆ ವಂದನಾರ್ಪಣೆಯನ್ನು ವಿದ್ಯಾರ್ಥಿ ಅಭಿಷೇಕ್ ನಡೆಸಿಕೊಟ್ಟು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.