
ಬೆಂಗಳೂರು: ’ನಾನು ರೋಷನ್ ಅವರನ್ನು ವರಿಸಲು ಅಪ್ಪು ಸರ್ ಕಾರಣ’ ಎಂದು ನಿರೂಪಕಿ ಅನುಶ್ರೀ ತಿಳಿಸಿದ್ದಾರೆ. ನಿರೂಪಕಿ, ನಟಿ ಅನುಶ್ರೀ ಅವರು ಗುರುವಾರ ಕೊಡಗು ಮೂಲದ ರೋಷನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆಯ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅನುಶ್ರೀ ’ಒಂದು ಲೆಕ್ಕದಲ್ಲಿ ಹೇಳೋದಾದ್ರೆ ನಮ್ಮಿಬ್ಬರನ್ನು ಸೇರಿಸಿದ್ದೇ ಅಪ್ಪು ಸರ್ ಎಂದು ತಮ್ಮ ಪ್ರೀತಿ ಆರಂಭವಾದ ಕ್ಷಣಗಳನ್ನು ಹಂಚಿಕೊಂಡರು. ನಮ್ಮದು ಸರಳ ಪ್ರೇಮಕಥೆ. ನಾವಿಬ್ಬರು ಮೊದಲು ಸ್ನೇಹಿತರಾದೆವು. ಆಮೇಲೆ ಒಟ್ಟಿಗೆ ಕಾಫಿ ಕುಡಿದೆವು. ಒಬ್ಬರಿಗೊಬ್ಬರು ಇಷ್ಟ ಆದೆವು. ಲವ್ ಆಯ್ತು. ಇವಾಗ ಮದುವೆ ಆದೆವು. ರೋಷನ್ ಕೂಡ ಅಪ್ಪು ಅವರ ಅಭಿಮಾನಿ. ಅಪ್ಪು ಸರ್ ಅವರ ‘ಪುನೀತ ಪರ್ವ’ ಕಾರ್ಯಕ್ರಮದ ಮೂಲಕ ನಮ್ಮಿಬ್ಬರ ಪರಿಚಯವಾಯಿತು. ಒಂದು ಲೆಕ್ಕದಲ್ಲಿ ಹೇಳೋದಾದರೆ ನಮ್ಮಿಬ್ಬರನ್ನು ಸೇರಿಸಿದ್ದೇ ಅಪ್ಪು ಸರ್ ಎಂದು ಅನುಶ್ರೀ ತಿಳಿಸಿದರು.
ಇದೇ ವೇಳೆ ಮಾತನಾಡಿದ ರೋಷನ್, ನಾನು ಐಟಿ ಉದ್ಯೋಗಿ, ಕಳೆದ ೫ ವರ್ಷಗಳಿಂದ ನನಗೆ ಅನು ಅವರ ಪರಿಚಯವಿದೆ. ೩ ವರ್ಷಗಳ ಹಿಂದೆ ನಾವಿಬ್ಬರು ಆಪ್ತರಾದೆವು. ಯಾವತ್ತೂ ನನಗೆ ಅವರು ಸೆಲಿಬ್ರಿಟಿ ಎಂದು ಅನಿಸಿಲ್ಲ ಎಂದು ಹೇಳಿದರು.
ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿರುವ ಅನುಶ್ರೀ ಮದುವೆ ಮಂಟಪದಲ್ಲಿ ಪುನೀತ್? ರಾಜ್???ಕುಮಾರ್ ಫೋಟೋ ಇರಿಸಲಾಗಿತ್ತು. ಭಾವಚಿತ್ರವನ್ನು ಪುಷ್ಪಾಲಂಕಾರದಿಂದ ಶೃಂಗರಿಸಲಾಗಿತ್ತು. ಈ ಮೂಲಕ ಅಪ್ಪು ಮೇಲಿನ ಪ್ರೀತಿ ಹಾಗೂ ಅವರ ಆಶೀರ್ವಾದ ಸಿಕ್ಕಿದೆ ಎಂಬ ನಂಬಿಕೆಯಲ್ಲಿ ಅನುಶ್ರೀ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ನನಗೆ ಮಂತ್ರ ಮಾಂಗಲ್ಯ ಆಗಬೇಕು ಅಂತಾ ಬಹಳ ಆಸೆ ಇತ್ತು. ಆದ್ರೆ ಅದರದ್ದು ಕೆಲವೊಂದು ರೂಲ್ಸ್ ಇದೆ. ಹಾಗಾಗಿ ಕಷ್ಟ ಆಯ್ತು. ಮದುವೆ ಎನ್ನುವುದು ಒಂದು ಹೆಣ್ಣಿನ ಬಹು ದೊಡ್ಡ ಕನಸು. ನಾವು ಮದುವೆ ಹೇಗೆ ಆಗ್ತೀವಿ ಅನ್ನೋದು ಮುಖ್ಯ ಅಲ್ಲ, ಮದುವೆ ಬಳಿಕ ಹೇಗೆ ಜೀವನವನ್ನು ಸರಿದೂಗಿಸಿಕೊಂಡು ಹೋಗುತ್ತೇವೆ ಎನ್ನುವುದು ಮುಖ್ಯ’
- ಅನುಶ್ರೀ, ನಿರೂಪಕಿ