
ಸೈದಾಪುರ:ಮಾ.16:ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದೂ ಶಿಕ್ಷಕರಾಗುವ ನೀವುಗಳು ಕಾರ್ಯಗಾರದ ಜ್ಞಾನವನ್ನು ನಿಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡರೆ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಮುಖ್ಯುಗುರು ಲಿಂಗಾರೆಡ್ಡಿ ನಾಯಕ ಹೇಳಿದರು.
ಪಟ್ಟಣದ ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿನಲ್ಲಿ ಎಪಿಡಿ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಸಂವೇದನ ಶೀಲತಾ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಉತ್ತಮ ಸಾಧನೆ ಮಾಡಲು ಪಠ್ಯದ ಜೊತೆಗೆ ಪೂರಕ ಜ್ಞಾನ ಅತಿ ಮಹತ್ವದ್ದಾಗಿದ್ದೂ ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶರಣಮ್ಮ ಮಾನಸಿಕ ಅಸ್ವಸ್ತರ ಕುರಿತು, ಒತ್ತಡ ನಿರ್ವಹಣೆ, ಮಾನಸಿಕ ಅಸ್ವಸ್ತತೆ ಎಂದರೇನು, ಅದಕ್ಕೆ ಕಾರಣಗಳು, ಲಕ್ಷಣಗಳ ಬಗಗೆ ತಿಳಿಸಿದರು. ಫಿಜೋಯೋತೆರೇಪಿಸ್ಟ್ ವೈಷ್ಣವಿಯವರು 21 ವಿಧಗಳ ವಿಕಲ ಚೇತನತೆಗಳ ಬಗ್ಗೆ ಅಲ್ಲದೆ ಮನೆ ಆಧಾರಿತ ವ್ಯಾಯಮಗಳು, ಪೌಷ್ಟಿಕ ಆಹಾರ, ಚಲನವಲನ ಸಾಧನಗಳ ಪರಿಕಲ್ಪನೆಗಳ ಬಗಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಹಂಪಣ್ಣ ಸಜ್ಜನಶೆಟ್ಟಿ, ಸಾಬಯ್ಯ ರಾಯಪ್ಪನೋರ, ರಾಜಶೇಖರ ಪಾಟೀಲ, ಶ್ವೇತಾ ರಾಘವೇಂದ್ರ ಪೂರಿ, ಸತೀಶ ಪುರ್ಮಾಂ, ಸಂಗಾರೆಡ್ಡಿ, ಮೀನಾಕ್ಷಿ, ಎಪಿಡಿ ಸಂಸ್ಥೆಯ ತಾಲೂಕಾ ಸಂಯೋಜಕ ರಮೇಶ ಕಟ್ಟಿಮನಿ, ರಮೇಶ ಚಲುವಾದಿ, ಮಲ್ಲಿಕಾರ್ಜುನ, ಡಿ.ಎಲ್.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು, ಪದವಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು. ಸಂಗಾರೆಡ್ಡಿ ಪಾಟೀಲ ನಿರೂಪಿಸಿ, ವಂದಿಸಿದರು.
ತರಬೇತಿ ಹಂತದಲ್ಲಿರುವ ನೀವುಗಳು ಎಲ್ಲರಿಗೂ ಕಡ್ಡಾಯ ಹಾಗೂ ಗುಣಾತ್ಮಕ ಶಿಕ್ಷಣ ನೀಡುವಂತಾಗಲು ವೃತ್ತಿಯಲ್ಲಿ ಕಂಡು ಬರುವ ಸಮಸ್ಯೆಗಳ ಪರಿಹಾರವನ್ನು ಕಂಡು ಕೊಳ್ಳಲು ಈ ವಿದಧ ಕಾರ್ಯಕ್ರಮಗಳು ನೆರವಾಗಲಿವೆ. ಸರಿಯಾದ ರೀತಿಯಲ್ಲಿ ಸದುಪಯೋಗ ಪಡೆದುಕೊಂಡಾಗ ಮಾತ್ರ ಕಾರ್ಯಕ್ರಮದ ಮಹತ್ವ ಹೆಚ್ಚಾಗುತ್ತದೆ.
ಕರಬಸಯ್ಯ ದಂಡಿಗಿಮಠ ಪ್ರಾಂಶುಪಾಲರು ವಿ.ವ.ಡಿ.ಎಲ್.ಇಡಿ ಕಾಲೇಜು ಸೈದಾಪುರ.



























