Home ಜಿಲ್ಲೆ ಹೊಸ ಜಾಹೀರಾತು ನೀತಿಯಲ್ಲಿದ್ದ ಕೆಲ ನಿಯಮಗಳನ್ನು ತೆಗೆದು ಹಾಕುವಂತೆ ಸರ್ಕಾರಕ್ಕೆ ಒತ್ತಡ ಹೇರಲು ವಿರೋಧ ಪಕ್ಷದ...

ಹೊಸ ಜಾಹೀರಾತು ನೀತಿಯಲ್ಲಿದ್ದ ಕೆಲ ನಿಯಮಗಳನ್ನು ತೆಗೆದು ಹಾಕುವಂತೆ ಸರ್ಕಾರಕ್ಕೆ ಒತ್ತಡ ಹೇರಲು ವಿರೋಧ ಪಕ್ಷದ ನಾಯಕರಿಗೆ ಮನವಿ

ಬೀದರ ಎ.೧೩: ಇತ್ತೀಚಿಗೆ ಕರ್ನಾಟಕ ರಾಜ್ಯ ಸರ್ಕಾರವು  ೨೦೨೬ ಹೊಸಜಾಹೀರಾತು ನೀತಿಯನ್ನು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದು ಈಗ ಜಾರಿಯಾಗುವ ಹಂತದಲ್ಲಿದೆ. ಈ ಜಾಹೀರಾತು ನೀತಿಯಲ್ಲಿ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳಿಗೆ ಹಲವಾರು ಕಠಿಣ ನಿಯಮಗಳನ್ನು ಜಾರಿಗೆ ತರಲಾಗುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಈ ಪತ್ರಿಕೆಗಳ ಅಸ್ತಿತ್ವಕ್ಕೆ ಮತ್ತು ಮುಂದುವರಿಕೆ ಅಸಾಧ್ಯ ವಾಗುವ ಸಂಪೂರ್ಣ ಸಾಧ್ಯತೆ ಇದೆ ಹೀಗಾಗಿ  ಈ ನೀತಿಯಲ್ಲಿದ್ದ  ಕೆಲ  ನಿಯಮಗ ಳು ತಕ್ಷಣಕ್ಕೆ  ಹಿಂಪAಡೆದು  ರಾಜ್ಯ ಮುಖ್ಯಮಂತ್ರಿ ಹಾಗೂ  ವಾರ್ತಾ ಇಲಾಖೆಯ ಸಚಿವರಾಗಿದ್ದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರ ಮೇಲೆ  ತಮ್ಮಿಂದ ಒತ್ತಡ ಹೇರಿ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳನ್ನು ಉಳಿತಾಯಕ್ಕೆ ಕ್ರಮ ವಹಿಸಬೆಕೆಂದು ಕರ್ನಾಟಕ ಕಾರ್ಯನಿರತ  ದಿನ ಪತ್ರಿಕೆಗಳ ಸಂಪಾದಕರ ಸಂಘ  (ರಿ) ಬೆಂಗಳೂರು ಘಟಕ ಬೀದರಿಂದ  ಇಂದು  ದಿನಾಂಕ ೧೩-೦೪-೨೦೨೬ ರಂದು ಬೆಳಿಗ್ಗೆ ರಾಜ್ಯ ವಿಧಾನ ಸಭೇಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕರವರಿಗೆ ಮನವಿ ಸಲ್ಲಿಸಲಾಯಿತು.
 ಮನವಿ ಸ್ವೀಕರಿಸಿ ಮಾತನಾಡಿದ ಅವರು ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಉಳಿಗಾಲಕ್ಕೆ  ಸರ್ಕಾರದ ಮೇಲೆ ಒತ್ತಡ ಹಾಕಿ ಸಂಬAಧಪಟ್ಟ ಅವರಿಗೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿಜಯಕುಮಾರ ಪಾಟೀಲ , ಪ್ರಧಾನ ಕಾರ್ಯದರ್ಶಿ ಶಶಿಕುಮಾರ ಪಾಟೀಲ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಅಶೋಕಕುಮಾರ ಕರಂಜಿ ಗಾದಗಿ, ವಚನ ಕ್ರಾಂತಿ ಪ್ರಾದೇಶಿಕ ದಿನ ಪತ್ರಿಕೆ ಸಂಪಾದಕರಾದ ಬಾಬುವಾಲಿ, ಬೀದರ ಜಾಗೃತ ಹಿಂದಿ ದಿನ ಪತ್ರಿಕೆಯ ಸಂಪಾದಕರಾದ ಶ್ರೀನಿವಾಸ ಚೌದರಿ, ಹಾಯ್ ಬೀದರ ಸಂಪಾದಕರಾದ ನಂದುಕುಮಾರ ಕರಂಜೆ , ಸಚೀನ ಕುಮಾರ ಕರಂಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು ಎಂದು ಜಿಲ್ಲಾಧ್ಯಕ್ಷರಾದ ವಿಜಯಕುಮಾರ ಪಾಟೀಲ ಅವರು ತಿಳಿಸಿದ್ದಾರೆ.