
ಕಲಬುರಗಿ,ಡಿ.8- ನಗರದ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ಮತ್ತು ಜನಪದ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿದರು
ಅವರು. ಮಕ್ಕಳು ಸರ್ವಾಗಿನ ಅಭಿವೃದ್ಧಿ ಸಾಧಿಸಬೇಕಾದರೆ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಜನಪದ ಕಲೆ ಸಂಸ್ಕøತಿ ಉಳಿಸಿ ಬೆಳೆಸಲು ಇಂತಹ ಪ್ರದರ್ಶನಗಳು ಸಹಕಾರಿಯಾಗಿದ್ದು, ಜಿಲ್ಲೆಯಲ್ಲಿ ಅಪ್ಪಾಜಿ ಗುರುಕುಲ ಶಾಲೆ ನಡೆಸುವ ಇಂತಹ ವಿಶೇಷ ಕಾರ್ಯಕ್ರಮಗಳು ಮಾದರಿಯಾಗಿದೆ ಎಂದರು.
ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಸಲು ಶಾಲಾ ಆಡಳಿತ ಮಂಡಳಿಗೆ ವಿದ್ಯಾರ್ಥಿಗಳು ಪಾಲಕ ಪೆÇೀಷಕರು ಪೆÇ್ರೀತ್ಸಾಹ ನೀಡಬೇಕು ಇದರಿಂದ ಶಾಲೆಗೆ ಹಾಗೂ ವಿದ್ಯಾರ್ಥಿಗಳಿಗೆ ಕಿರ್ತಿ ಬರುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಶ್ರೀನಿವಾಸ್ ಸರಡಗಿ ಪೂಜ್ಯ ರೇವಣಸಿದ್ದ ಶಿವಾಚಾರ್ಯರು ಮಾತನಾಡಿ. ಮಕ್ಕಳಿಗೆ ಕಲಿಕೆ ಕಲಿಕಾ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮಾಡಿಸುವುದು ತುಂಬಾ ಅವಶ್ಯಕವಾಗಿದೆ. ಈ ಶಾಲೆ ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದರು.
ನಂತರ ಜೆಸ್ಕಾಂನ ಅಧ್ಯಕ್ಷರಾಗಿರ್ತಕ್ಕಂತ ಪ್ರವೀಣ್ ಪಾಟೀಲ್ ಹರವಾಳ ಅವರು ಮಾತನಾಡಿ. ಮಕ್ಕಳು ಚಿಗುರುವಾಗಲೇ ಬೆಳೆಸಬೇಕು ಮಕ್ಕಳು ಕೆಸರು ಮುದ್ದೆ ಇದ್ದಂತೆ. ಶಿಕ್ಷಕರು ಪಾಲಕರು ಯಾವ ರೀತಿ ಅದನ್ನು ಬೆಳೆಸುತ್ತೇವೆ ಹಾಗೆ ಬೆಳೆಯುತ್ತದೆ ಎಂದು ತಮ್ಮ ಅಭಿಪ್ರಾಯಸಿದರು. ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ರಾಜಕುಮಾರ್ ಬಿ ಉದನೂರವರು ಸ್ವಾಗತ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಯುನೈಟೆಡ್ ಆಸ್ಪತ್ರೆ ವತಿಯಿಂದ ಹಾಗೂ ಶ್ರೀ ಸಿದ್ಧರಾಮೇಶ್ವರ ಕಣ್ಣಿನ ಆಸ್ಪತ್ರೆ ವತಿಯಿಂದ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ನಡೆಯಿತು ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪಾಲಕರು ಆರೋಗ್ಯ ತಪಾಸಣೆ ಮತ್ತು ನೇತ್ರ ತಪಾಸಣೆ ಮಾಡಲಾಯಿತು
ಈ ಸಂದರ್ಭದಲ್ಲಿ ನಡೆದ ಮಕ್ಕಳಿಂದ ವಿಜ್ಞಾನ ಮತ್ತು ಜನಪದ ವಸ್ತು ಪ್ರದರ್ಶನ ಹಾಗೂ ವೇಷ ಭೂಷಣವನ್ನು ನೋಡಿ ಪಾಲಕ ಪೆÇೀಷಕರು ಅತಿಥಿ ಮಾನ್ಯರು ಕಣ್ಣು ತುಂಬಿಕೊಂಡು ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು 9ನೇ ತರಗತಿ ವಿದ್ಯಾರ್ಥಿನಿ ಅರ್ಚನ ಅವರು ನಡೆಸಿಕೊಟ್ಟರು ಅಕ್ಷರ ಸೌಂದರ್ಯ ಶಾಂಭವಿ ಅವರಿಂದ ಪ್ರಾರ್ಥನೆ ಗೀತೆ ಹಾಡಲಾಯಿತು. ಕುಮಾರಿ ಶಂಭಾವಿಯವರು ಕಾರ್ಯಕ್ರಮದ ವಂದನಾರ್ಪಣೆ ನಡೆಸಿಕೊಟ್ಟರು
ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಶರಣರಾಜ್ ಚಪ್ಪರಬಂದಿ. ಡಾ. ಸಿದ್ದಲಿಂಗ ರೆಡ್ಡಿ ಡಾ. ವಿಜಯ ಪಾಟೀಲ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಭಾಗಮ್ಮ ರಾಜಕುಮಾರ್ ಸೇರಿದಂತೆ. ಅಭಿಲಾಶ ಸೇರಿದಂತೆಸಾವಿತ್ರಿ, ಅರ್ಚನಾ, ಭಾಗ್ಯಶ್ರೀ, ಅಶ್ವಿನಿ, ದೀಪಾಲಿ, ಶಾಂತಾ, ಲತಾ, ವೈಷ್ಣವಿ, ರಾಹುಲ್, ಶಶಿಕಲಾ,. ಸೇರಿದಂತೆ ಹಲವರು ಇದ್ದರು.
























