ಎನ್.ವಿ.ಪಿಯು ಕಾಲೇಜಿನಲ್ಲಿ ಮಾದಕ ವಸ್ತುಗಳ ವಿರೋಧಿ ದಿನಾಚರಣೆ

ಕಲಬುರಗಿ:ಜೂ.27: ನಗರದ ನೂತನ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ‘ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ವಿರೋಧಿ ದಿನ”ವನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಸತೀಶ್ ಕುಮಾರ್ ಉಮದಿ, ಉಪನ್ಯಾಸಕರಾದ ಎನ್ .ಆರ್. ಕುಲಕರ್ಣಿ, ಡಾ ಶಿವಾಜಿ ಮೇತ್ರೆ,ಭಾರತೀಶ್ ಬೆಳಗುಂದಿ, ನಚಿಕೇತ್ ವಳಸಂಗಕರ್, ಗುರುಲಿಂಗಯ್ಯ ಸ್ವಾಮಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.