
ಜಮಖಂಡಿ:ಅ.10:ದಿನಾಂಕ 08.10.2025 ರಂದು ಪತ್ರಕರ್ತ ಬಸವರಾಜ ಖಾನಗೊಂಡ್ ( 40 ವರ್ಷ) ತಾಲೂಕಿನ ಮದರಖಂಡಿ ಗ್ರಾಮದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತ ಪಟ್ಟು ಹಿಟ್ ಆಂಡ ರನ್ ಪ್ರಕರಣ ಕೂಡ ದಾಖಲಾಗಿತ್ತು.
ತನಿಖೆಯ ಸಮಯದಲ್ಲಿ ಸಿ.ಪಿ.ಐ ಮಲ್ಲಪ್ಪ ಮಡ್ಡಿ ಪಿ.ಎಸ್.ಐ ಗಂಗಾಧರ ಪೂಜೆರಿ ನೇತೃತ್ವದ ಪೆÇೀಲಿಸ ತಂಡ ಅಪಘಾತದ ಬಗ್ಗೆ ಅನುಮಾನ ವ್ಯಕ್ತಪಡಿಸಿ ತಾಂತ್ರಿಕ ಪುರಾವೆಗಳ ವಿಶ್ಲೇಷಣೆ ಮತ್ತು ಸ್ಥಳೀಯರ ವಿಚಾರಣೆಯಲ್ಲಿ ಆಕಸ್ಮಿಕ ಡಿಕ್ಕಿಗೆ ಹೊಂದಾನಿಕೆಯಾಗದೆ ಇದ್ದಾಗ ತನಿಖಾ ತಂಡವು ಅಪಘಾತ ಪಡಿಸಿದ ವಾಹನವನ್ನು ಪತ್ತೆ ಹಚ್ಚಲು ಪ್ರಾರಂಭಿಸಿ ರಬಕವಿ ನಗರದ ಭಾರಪೇಟ ಗಲ್ಲಿಯ ಅಶ್ಫಾಕ್ ಸುಲೇಮಾನ ಮುಲ್ಲಾ (26)ಈತನ ಅಶೋಕ ಲೈಲೇಂಡ ವಾಹನ ಎಂದು ಗುರುತು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ವಾಹನವನ್ನು ವಶಪಡಿಸಿಕೊಂಡು ಆರೋಪಿತ ಅಶ್ಫಾಕ್ ಸುಲೇಮಾನ್ ಮುಲ್ಲಾ ಮತ್ತು ಆತನ ಸಹಚರರಾದ ನಂದೀಶ್ವರ್ ಮಹಾದೇವ ಪವಾಡಿ ಮತ್ತು ಮಹೇಶ್ ಶ್ರೀಶೈಲ ಪವಾಡಿರನ್ನ ವಶಕ್ಕೆ ಪಡೆದು ವಿಚಾರಿಸಿದ್ದಾಗ ಮದರಖಂಡಿ ಗ್ರಾಮದ ಬಳಿ ಸ್ಕೂಟರ್‍ಗೆ ವಾಹನವನ್ನು ಡಿಕ್ಕಿ ಹೊಡೆದು ಬಸವರಾಜ್ ಖಾನಗೊಂಡನ್ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ ಖತರ್ನಾಕ್ ಗ್ಯಾಂಗ್ ಅನ್ನು ಜಮಖಂಡಿ ಪೆÇಲೀಸರು ಘಟನೆ ನಡೆದ 24 ಗಂಟೆಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿತರು ಹಲವು ವರ್ಷಗಳಿಂದ ಅನ್ನ ಭಾಗ್ಯ ಪಡಿತರ ಅಕ್ಕಿಯನ್ನು ಕಾಳ ಸಂತ್ತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತಿದ್ದರು ಎಂದು ತಿಳಿದು ಬಂದಿದೆ.
ಸರ್ಕಾರಿ ಅನ್ನ ಭಾಗ್ಯ ಪಡಿತರ ಅಕ್ಕಿ ಸಂಗ್ರಹಿಸಿ ಮಾರಾಟ ಮಾಡುವ ಅಕ್ರಮ ವ್ಯವಹಾರವನ್ನು ಬಹಿರಂಗಪಡಿಸುವುದಾಗಿ ಬಸವರಾಜ ಬೆದರಿಕೆ ಹಾಕುತ್ತಿದ್ದನು ಆ ಭಯದಿಂದ ಈ ಕೃತ್ಯ ಮಾಡಲಾಗಿದೆ ಎಂದು ಆರೋಪಿತ ಅಶ್ಫಾಕ್ ಮುಲ್ಲಾ ಒಪ್ಪಿಕೊಂಡಿದ್ದಾನೆ ಜಿಲ್ಲಾ ವರೀಷ್ಠಾಧಿಕಾರಿ ಸಿದ್ಧಾರ್ಥ ಗೋಯಲ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.