
ಜೇವರಗಿ,ಮಾ.11:ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಸ್ಮಯ ವಾಣಿ ದಿನಪತ್ರಿಕೆ ಹಾಗೂ ಚೇತನ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ ಮಹಿಳಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜೇವರಗಿಯ ಕರ್ನಾಟಕ ಕಲಾ ಸಂಶೋಧನಾ ಅಕಾಡೆಮಿಯ ವಿದ್ಯಾರ್ಥಿನಿ ಅಕ್ಷರಾ ರೆಡ್ಡಿ ಭಾಗವಹಿಸಿ, “ಬ್ರೂಣ ಹತ್ಯೆ” ಎಂಬ ಗಂಭೀರ ಸಾಮಾಜಿಕ ಸಮಸ್ಯೆಯ ಕುರಿತು ತಮ್ಮ ಅಭಿನಯದ ಮೂಲಕ ಜಾಗೃತಿ ಮೂಡಿಸಿದರು. ಅವರ ಪರಿಣಾಮಕಾರಿ ಅಭಿನಯವನ್ನು ಗುರುತಿಸಿ ಅವರಿಗೆ ಅಂತರಾಷ್ಟ್ರೀಯ ವನಿತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅವರ ಈ ಸಾಧನೆ ನಮ್ಮ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗಕ್ಕೂ ಹಾಗೂ ಜೇವರ್ಗಿ ತಾಲೂಕಿನ ನಾಗರಿಕರಿಗೂ ಹೆಮ್ಮೆಯ ವಿಷಯವಾಗಿದೆ. ತಮ್ಮ ಪ್ರತಿಭೆಯ ಮೂಲಕ ನಮ್ಮ ಸಂಸ್ಥೆಯ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿರುವ ಅಕ್ಷರಾ ರೆಡ್ಡಿ ಅವರಿಗೆ ಕರ್ನಾಟಕ ಕಲಾ ಸಂಶೋಧನಾ ಅಕಾಡೆಮಿ ಸ್ಥಾಪಕ ಅನಿಲ ಪವಾರ ಅವರು ಅಭಿನಂದನೆ ಸಲ್ಲಿಸಿದ್ದಾರೆ.


























