Home ಜಿಲ್ಲೆ ಕಲಬುರಗಿ ಅವಕಾಶಗಳನ್ನು ಬಳಸಿಕೊಳ್ಳಲು ಸಲಹೆ

ಅವಕಾಶಗಳನ್ನು ಬಳಸಿಕೊಳ್ಳಲು ಸಲಹೆ

ಕಲಬುರಗಿ:ಮಾ.9: ಇಲ್ಲಿನ ವಚನ ಸಮೂಹ ಸಂಸ್ಥೆಯ ಕಚೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ವಚನ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶರಣ ಅಲ್ಲಮಪ್ರಭು ನಾವದಗೆರೆಯವರ ಮಾರ್ಗದರ್ಶನದಲ್ಲಿ ಜರುಗಿದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ನೂರಕ್ಕು ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮ ಉದ್ಘಾಟಸಿದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ನಳಿನಿ ಮಹಾಗಾಂವಕರ ಮಾತನಾಡಿ, ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಅವುಗಳನ್ನು ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಗದೇವಿ ಚಟ್ಟಿಯವರು ಒಂದು ಕುಟುಂಬ ಚೆನ್ನಾಗಿರಬೇಕಾದರೆ ಆ ಕುಟುಂಬದ ಮಹಿಳೆಯ ಪಾತ್ರ ಮುಖ್ಯವಾಗಿರುತ್ತದೆ. ಮಕ್ಕಳನ್ನು ಸಂಸ್ಕಾರಯುತರಾಗಿ ಬೆಳೆಸುವಲ್ಲಿ ತಾಯಿಯ ಜವಾಬ್ದಾರಿ ಹೆಚ್ಚಿನದಿರುತ್ತದೆ. ಮನೆಯಲ್ಲಿರುವ ಪುರುಷರು ಅವಳಿಗೆ ಸಂಪೂರ್ಣ ಸಹಕಾರ ನೀಡಬೇಕೆಂದರು.

ಉಪನ್ಯಾಸ ನೀಡಿದ ಡಾ. ಗಂಗಾ ಪೂಜಾರ ಅವರು 12 ನೇ ಶತಮಾನದಲ್ಲಿಯೇ ಬಸವಣ್ಣನವರು ಸ್ತ್ರೀಗೆ ಸಂಪೂರ್ಣ ಸ್ವಾತಂತ್ರ್ಯ ಕಲ್ಪಿಸಿದ್ದರು. ದೇವರ ದಾಸಿಮಯ್ಶನವರ ದಾಂಪತ್ಯ ಜೀವನ ಉದಾಹರಣೆ ನೀಡಿ ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವನಿಗೆ ಎನ್ನುವಂತೆ ಇಬ್ಬರೂ ಪರಸ್ಪರ ಅರಿತು ಬಾಳಿದರೆ ಬದುಕು ಸುಂದರವಾಗುತ್ತದೆ. ಗೃಹಸ್ಥ ಜೀವನವೇ ಶ್ರೆಷ್ಠವೆನಿಸುತ್ತದೆಂದು ಹಲವಾರು ನಿದರ್ಶನಗಳ ಮೂಲಕ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಲಿಂಗಾರತಿ ಅಲ್ಲಮಪ್ರಭು ನಾವದಗೆರೆ ಮಾತನಾಡಿ, ಪ್ರಾಚೀನ ಕಾಲದಿಂದಲೂ ಮನೆಯಲ್ಲಾಗಲಿ ಸಮಾಜದಲ್ಲಾಗಲಿ ಏನೇ ತಪ್ಪು ಘಟನೆಗಳು ಜರುಗಿದರು ಅದಕ್ಕೆಲ್ಲ ಸ್ತ್ರೀಯೇ ಕಾರಣವೆಂಬ ಕೆಟ್ಟ ಚಾಳಿ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಇನ್ನೊಬ್ಬರಿಗೆ ದೂಷಿಸದೆ ಮಹಿಳೆಯರು ಜಾಗೃತರಾಗಿಖಂಡಿಸಬೇಕೆಂದರು.

ಸಮಾಜದಲ್ಲಿ ಮಹಿಳೆ ಗಟ್ಟಿಯಾಗಿ ದನಿ ಎತ್ತಬೇಕಾದರೆ ಸಂಕಚಿತತೆಯಿಂದ ಹೊರಬರಬೇಕು.ಶಿಕ್ಷಣದ ಜೊತೆಗೆ ವಚನಗಳ ಅಧ್ಯಯನ ಮಾಡಿದರೆ ಆತ್ಮವಿಸ್ವಾಸ ಮೂಡುತ್ತದೆ. ಅದಕ್ಕಾಗಿಯೆ ವಚನ ಸಮೂಹ ಸಂಸ್ಥೆ ಇಂತಹ ಹಲವಾರು ಕಾರ್ಯಕ್ರಮಗಳು ಆಯೋಜಿಸುತ್ತದೆ. ನೀವು ಕೇವಲ ಅಡುಗೆ ಮನೆಗೆ ಸೀಮಿತಗೊಳ್ಳದೆ ಇಂತಹ ಕಾರ್ಯಕ್ರಮಗಳಲ್ಲಿ ಮುಕ್ತವಾಗಿ ಬೆರೆಯಬೇಕೆಂದರು. ವಚನ ಸಮೂಹ ಸಂಸ್ಥೆ ಕೇವಲ ಆರ್ಥಿಕವಾಗಿ ಸೇವೆಗೈಯುವುದಿಲ್ಲ ಜೊತೆಗೆ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದೆ ಇದರೊಂದಿಗೆ ತಾವೇಲ್ಲರೂಸಹಕರಿಸಬೇಕೆಂದು ಮನವಿ ಮಾಡಿಕೊಂಡರು.

ಮಹಿಳಾ ದಿನಾಚರಣೆ ಅಂಗವಾಗಿ ಕಲಬುರಗಿ ಕಚೇರಿಯ ಇಬ್ಬರು ಮಹಿಳಾ ಸಿಬ್ಬಂದಿಗಳಾದ ವಿಜಯಲಕ್ಷೀ, ಮಹಾಲಕ್ಷೀಯವರನ್ನು ಸನ್ಮಾನಿಸಲಾಯಿತು. ದೀಪಾಲಿ ಬಿರಾದಾರ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡರು. ಇದೇ ಸಂರ್ಭದಲ್ಲಿ ಮಾರ್ಚ 8 ರಂದೇ ಜನ್ಮ ತಳೆದ ಕುಮಾರಿ ರಿಷಿತಾಳ ಹುಟ್ಟುಹಬ್ಬದ ಶುಭಾಶಯ ಕೋರಲಾಯಿತು.

ಸಾಕ್ಷಿ ಶಿವರಂಜನ ಸತ್ಯಂಪೇಟೆ ಕವನ ವಾಚಿಸಿದರು. ಮಹಾದೇವಿ ಎಸ್. ಪಾಟೀಲ ಪ್ರಾರ್ಥಿಸಿದರು. ನೀಲಮ್ಮ ಪಂಡಿತರಾವ ಪಾಟೀಲ ಸ್ವಾಗತಿಸಿದರು. ಮಕ್ಕಳಿಂದ ವಚನಗಾಯನ ಜರುಗಿತು. ಶಶಿಕಲಾ ಮೊರಬದ ನಿರೂಪಿಸಿದರು. ಮಹಾನಂದಾ ಎಸ್. ಪಾಟೀಲ ವಂದಿಸಿದರು. ಸಂಸ್ಥೆಯ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿವಲಿಂಗಪ್ಪ ಗಣಪತಿ ಅವರಿಂದ ಪ್ರಸಾದ ದಾಸೋಹ ಜರುಗಿತು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.