
ವಿಜಯಪುರ, ಫೆ.6: ನಗರದ ರಾಷ್ಟ್ರೀಯ ಹೆದ್ದಾರಿ- 50ರಲ್ಲಿ ಇರುವ ಹೆಚ್.ಎಂ.ಕೆ ಕಾರ್ ಸರ್ವೀಸ್ ಸೆಂಟರ್‍ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿವೆ. 35 ಲಕ್ಷಕ್ಕೂ ಹೆಚ್ಚು ಬಿಡಿ ಭಾಗಗಳು ಭಸ್ಮವಾಗಿ ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಸರ್ವೀಸ್‍ಗೆ ನಿಲ್ಲಿಸಲಾಗಿದ್ದ ಸುಮಾರು 20 ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಹನಮಂತ ಕನಮಡಿ ಎಂಬುವರಿಗೆ ಸೇರಿದ ಈ ಕಾರ್ ಸರ್ವೀಸ್ ಸೆಂಟರ್‍ನಲ್ಲಿ ರಿಪೇರಿ ಹಾಗೂ ಸರ್ವೀಸ್‍ಗಾಗಿ ಬಂದಿದ್ದ ವಿವಿಧ ಕಂಪನಿಗಳ ಕಾರುಗಳು ಸುಟ್ಟು ಭಸ್ಮವಾಗಿವೆ. ಬೆಂಕಿಯ ತೀವ್ರತೆಯಿಂದ ಇಡೀ ಸರ್ವೀಸ್ ಸೆಂಟರ್
ಸುಟ್ಟಿದ್ದು, ಸುತ್ತಮುತ್ತಲೂ ದಟ್ಟ ಹೊಗೆ ಆವರಿಸಿತ್ತು.
ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಹಿರಿಯ ಪೆÇಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುದೈವ ವಶಾತ್ ಈ ಸಮಯದಲ್ಲಿ ಸರ್ವೀಸ್ ಸೆಂಟರ್ ಒಳಗಡೆ ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಘಟನೆಯ ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ಸುತ್ತಮುತ್ತ ವ್ಯಾಪಿಸದಂತೆ ತಕ್ಷಣ ಕ್ರಮ ಕೈಗೊಂಡು ಹರಸಾಹಸ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಗೋಳ ಗುಮ್ಮಟ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.























