ಬಸ್’ನ ಸ್ಟೇರಿಂಗ್ ಲಾಕ್’ನಿಂದ ಅಪಘಾತ; ಓರ್ವ ಮಹಿಳೆಗೆ ಗಾಯ

ಚಿತ್ತಾಪುರ; ಜ.31:ಪಟ್ಟಣದ ಹೊರವಲಯದ ಕಲಬುರಗಿ-ಚಿತ್ತಾಪುರ ರಸ್ತೆಯಲ್ಲಿ ಬಸ್’ನ ಸ್ಟೇರಿಂಗ್ ಲಾಕ್ ಆಗಿದ್ದರಿಂದ ಬಸ್ ಚಾಲಕ ರಸ್ತೆ ಪಕ್ಕದಲ್ಲಿ ಇಳಿಸಿದ್ದರಿಂದ ಓರ್ವ ಮಹಿಳೆಗೆ ಗಾಯಗಳಾಗಿರುವ ಘಟನೆ ಜರುಗಿದೆ.
ಬಸ್ ಕಲಬುರಗಿಯಿಂದ ಚಿತ್ತಾಪುರಕ್ಕೆ ಬರುತ್ತಿದ್ದಾಗ ಈ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ. ಬಸ್’ನಲ್ಲಿ ಒಟ್ಟು 30 ಕ್ಕೂ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಅದರಲ್ಲಿ ಓರ್ವ ಮಹಿಳೆಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್’ಐ ಮಂಜುನಾಥ ರೆಡ್ಡಿ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.