
ಬೆಂಗಳೂರು,ರ್ಮಾ ೧೫- ಭಾರತ ಚುನಾವಣಾ ಆಯೋಗವು ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಈ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಏಪ್ರಿಲ್ ೯ರಂದು ನಡೆಯಲಿದೆ
ಬಾಗಲಕೋಟೆ (ಕ್ಷೇತ್ರ ಸಂ. ೨೪): ಹೆಚ್. ವೈ. ಮೇಟಿ (ಮೇಟಿ ಹುಲ್ಲಪ್ಪ ಯಮನಪ್ಪ) ಹಾಗೂ? ದಾವಣಗೆರೆ ದಕ್ಷಿಣ (ಕ್ಷೇತ್ರ ಸಂ. ೧೦೭): ಶಾಮನೂರು ಶಿವಶಂಕರಪ್ಪ ಈ ಇಬ್ಬರು ಹಿರಿಯ ಶಾಸಕರ ನಿಧನದಿಂದಾಗಿ ಈ ಉಪಚುನಾವಣೆ ನಡೆಯುತ್ತಿದೆ.
ಚುನಾವಣಾ ವೇಳಾಪಟ್ಟಿ:
ಅಧಿಸೂಚನೆ ಪ್ರಕಟಣೆ: ೧೬ ಮಾರ್ಚ್ ೨೦೨೬
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ೨೩ ಮಾರ್ಚ್ ೨೦೨೬
ಮತದಾನದ ದಿನಾಂಕ: ೦೯ ಏಪ್ರಿಲ್ ೨೦೨೬
ಮತ ಎಣಿಕೆ ಮತ್ತು ಫಲಿತಾಂಶ: ೦೪ ಮೇ ೨೦೨೬
*?ಮತದಾರರ ಅಂಕಿ-ಅಂಶಗಳು
ಬಾಗಲಕೋಟೆ: ಒಟ್ಟು ೨,೫೯,೨೬೦ ಮತದಾರರಿದ್ದಾರೆ. ಪುರುಷರು: ೧,೨೬,೭೬೧, ಮಹಿಳೆಯರು: ೧,೩೨,೪೭೬, ಇತರರು: ೨೩ ಇದರಲ್ಲಿ ೪,೧೮೮ ಯುವ ಮತದಾರರು ಹಾಗೂ ೩೮ ಮಂದಿ ೧೦೦ ವರ್ಷ ದಾಟಿದ ಹಿರಿಯ ಮತದಾರರಿದ್ದಾರೆ.
ದಾವಣಗೆರೆ ದಕ್ಷಿಣ: ಒಟ್ಟು ೨,೩೧,೬೮೩ ಮತದಾರರಿದ್ದಾರೆ. ಪುರುಷರು: ೧,೧೩,೬೫೪, ಮಹಿಳೆಯರು: ೧,೧೭,೯೮೬, ಇತರರು: ೪೩ ಹಾಗೂ ೨,೭೭೪ ಯುವ ಮತದಾರರು ಹಾಗೂ ೪೪ ಮಂದಿ ೧೦೦ ವರ್ಷ ದಾಟಿದ ಹಿರಿಯರಿದ್ದಾರೆ.
ವಿಶೇಷ ವರ್ಗ: ಎರಡೂ ಕ್ಷೇತ್ರಗಳಲ್ಲಿ ಒಟ್ಟು ೫,೧೫೧ ಅಂಗವಿಕಲ (Pತಿಆ) ಮತದಾರರನ್ನು ಗುರುತಿಸಲಾಗಿದೆ.
ಮತದಾನ ಕೇಂದ್ರಗಳು ಮತ್ತು ತಾಂತ್ರಿಕ ಸಿದ್ಧತೆ:
ಮತದಾನ ಕೇಂದ್ರಗಳು:
ಬಾಗಲಕೋಟೆಯಲ್ಲಿ ೩೧೯ ಮತ್ತು ದಾವಣಗೆರೆ ದಕ್ಷಿಣದಲ್ಲಿ ೨೮೪ ಸೇರಿದಂತೆ ಒಟ್ಟು ೬೦೩ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಎಲ್ಲಾ ಕೇಂದ್ರಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (ಇಗಿಒ) ಮತ್ತು ವಿವಿಪ್ಯಾಟ್ (ಗಿಗಿPಂಖಿ) ಬಳಸಲಾಗುವುದು. ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ (ಸುಮಾರು ೧೬೦% ರಿಂದ ೨೦೦%) ಯಂತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ.
ಪ್ರಮುಖ ಸೂಚನೆಗಳು:
ಮತದಾರರ ಗುರುತಿನ ಚೀಟಿ, ಮತದಾನಕ್ಕೆ ಫೋಟೋ ಸಹಿತ ಮತದಾರರ ಗುರುತಿನ ಚೀಟಿ (ಇPIಅ) ಮುಖ್ಯ ದಾಖಲೆಯಾಗಿದೆ. ಇದರ ಜೊತೆಗೆ ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಆಯೋಗವು ಸೂಚಿಸಿರುವ ೧೨ ಪರ್ಯಾಯ ದಾಖಲೆಗಳನ್ನು ಬಳಸಬಹುದು.
ಮಾದರಿ ನೀತಿ ಸಂಹಿತೆ
ಚುನಾವಣೆ ಘೋಷಣೆಯಾದ ದಿನಾಂಕದಿಂದಲೇ ಅಂದರೆ ೧೫.೦೩.೨೦೨೬ ರಿಂದ ಸಂಬಂಧಪಟ್ಟ ಜಿಲ್ಲೆಗಳಲ್ಲಿ ಮಾದರಿ ನೀತಿ ಸಂಹಿತೆಯು ಜಾರಿಗೆ ಬಂದಿರುತ್ತದೆ.
ಅಪರಾಧ ಹಿನ್ನೆಲೆ ಘೋಷಣೆ:
ಅಭ್ಯರ್ಥಿಗಳು ತಮ್ಮ ಅಪರಾಧ ಹಿನ್ನೆಲೆಗಳಿದ್ದಲ್ಲಿ ಅವುಗಳನ್ನು ಕನಿಷ್ಠ ೩ ಬಾರಿ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಲ್ಲಿ ಪ್ರಕಟಿಸುವುದು ಕಡ್ಡಾಯವಾಗಿದೆ.
ಬಾಕಿ ರಹಿತ ಪತ್ರ (ಓo ಆues ಅeಡಿಣiಜಿiಛಿಚಿಣe): ಸರ್ಕಾರಿ ವಸತಿ ಸೌಲಭ್ಯ ಪಡೆದ ಅಭ್ಯರ್ಥಿಗಳು ಕಳೆದ ೧೦ ವರ್ಷಗಳ ಬಾಡಿಗೆ, ನೀರು, ವಿದ್ಯುತ್ ಮತ್ತು ದೂರವಾಣಿ ಬಿಲ್ಗಳ ಬಾಕಿ ರಹಿತ ಪತ್ರವನ್ನು ಸಲ್ಲಿಸಬೇಕಾಗುತ್ತದೆ.
?ಹೆಚ್ಚಿನ ಮಾಹಿತಿಗಾಗಿ ಮತದಾರರು ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಅಥವಾ ’ಗಿoಣeಡಿ ಊeಟಠಿಟiಟಿe ಂಠಿಠಿ’ ಅನ್ನು ಬಳಸಬಹುದು ಎಂದು ಭಾರತ ಚುನಾವಣಾ ಆಯೋಗದ ಕಾರ್ಯದರ್ಶಿ ಸಂಜೀವ್ ಕುಮಾರ್ ಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























