Home ಕ್ರೈಂ ಸುದ್ದಿಗಳು ಸಾಮಾಜಿಕ ಬಹಿಷ್ಕಾರದಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಂಗಲ್ಯ ಸರ ತೆಗೆದು ನದಿಗೆ ಹಾರಿ ಜೀವತ್ಯಾಗ

ಸಾಮಾಜಿಕ ಬಹಿಷ್ಕಾರದಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಂಗಲ್ಯ ಸರ ತೆಗೆದು ನದಿಗೆ ಹಾರಿ ಜೀವತ್ಯಾಗ

ಯಾದಗಿರಿ, ಮಾ.16: ಸಾಮಾಜಿಕ ಬಹಿಷ್ಕಾರದ ನೋವನ್ನು ಸಹಿಸಲಾಗದೆ ಮಹಿಳೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಜೋಳದಡಗಿ ಗ್ರಾಮದ ಬಳಿ ನಡೆದಿದೆ.

ಯಾದಗಿರಿ ನಗರದ ಹೊರವಲಯದ ಗಿರಿನಗರ ನಿವಾಸಿ ಕಮಲಮ್ಮ (42) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ತಿಳಿದುಬಂದ ಮಾಹಿತಿಯ ಪ್ರಕಾರ, ಕಮಲಮ್ಮ ಅವರ ಕುಟುಂಬವನ್ನು ತಮ್ಮದೇ ಸಮುದಾಯದವರು ಕೆಲವು ವಿಚಾರಗಳ ಹಿನ್ನೆಲೆ ಸಾಮಾಜಿಕವಾಗಿ ಬಹಿಷ್ಕಾರ ಮಾಡಿದ್ದರಿಂದ ಅವರು ತೀವ್ರ ಮನಸ್ತಾಪಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ಘಟನೆಯ ದಿನ ರಾತ್ರಿ ವೇಳೆ ಕಮಲಮ್ಮ ಅವರು ಜೋಳದಡಗಿ ಗ್ರಾಮದ ಸಮೀಪದ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ತೆರಳಿ, ತನ್ನ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ತೆಗೆದು ಇಟ್ಟುಕೊಂಡು ಭೀಮಾ ನದಿಗೆ ಹಾರಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿದು ವಡಗೇರ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವಡಗೇರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣಗಳ ಕುರಿತು ಪೆÇಲೀಸರು ತನಿಖೆ ಮುಂದುವರೆಸಿದ್ದಾರೆ.

ಸ್ಥಳೀಯರ ಹೇಳಿಕೆ ಪ್ರಕಾರ, ಸಮುದಾಯದೊಳಗಿನ ಕೆಲವು ವಿಚಾರಗಳಿಂದ ಕುಟುಂಬವನ್ನು ದೂರವಿಟ್ಟು ಬಹಿಷ್ಕಾರ ಮಾಡಲಾಗಿದ್ದು, ಇದರಿಂದಲೇ ಮಹಿಳೆ ಮನನೊಂದು ಈ ದಾರುಣ ನಿರ್ಧಾರಕ್ಕೆ ಮುಂದಾಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.