ಗ್ರಂಥಾಲಯಕ್ಕೆ ಭೇಟಿ


ಚನ್ನಮ್ಮನ ಕಿತ್ತೂರು,ಜ.೩೦:
ಚನ್ನಬಸವೇಶ್ವರ ಜಾತ್ರಾ ನಿಮಿತ್ಯವಾಗಿ ತಾಲೂಕಿನ ಬೈಲೂರಿನ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮಿಜಿ ಹಾಗೂ ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿ ಮತ್ತು ಡಾ. ಶ್ರೀ ಮಹಾಂತ ಸ್ವಾಮಿಜಿ ಬೈಲೂರ ಗ್ರಾಮ ಸುತ್ತಾಡಿ ಗ್ರಾಪಂ ಹಾಗೂ ಗ್ರಂಥಾಲಯ ಮತ್ತು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿನೀಡಿದರು.


ಡಾ. ಶ್ರೀ ಮಹಾಂತ ಸ್ವಾಂಇಜಿ ಮಾತನಾಡಿ ಗ್ರಂಥಾಲಯದಲ್ಲಿರುವ ವಿವಿಧ ವಿಭಾಗಗಳನ್ನು ವಿಕ್ಷೀಸಿ ಮೆಚ್ಚುಗೆ ಜೊತೆಗೆ ಹರ್ಷ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಭಜನೆ ಕಲಾಕಾರ, ಪಿಡಿಓ ಈಶ್ವರ ಹಡಪದ, ಸಮಾಜ ಕಾರ್ಯಕರ್ತ ನಾಗೇಶ ಮರೆಪ್ಪಗೋಳ ಸತ್ಕರಿಸಿದರು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಮಂಜುನಾಥ ಮರೆಪ್ಪಗೋಳ, ಕಾರ್ಯದರ್ಶಿ ಬಸವರಾಜ ಅಂಬಡಗಟ್ಟಿ, ಶಶಿಧರ ಗಂಡಲಾಟಿ, ಸುನೀಲ್ ಹಿಟ್ನಾಳ, ಗ್ರಾಪಂ ಸದಸ್ಯ ಬಸವರಾಜ ನಾಯ್ಕರ, ಗ್ರಂಥಪಾಲಕ ಜಗದೀಶ ಅಂಗಡಿ, ಗ್ರಾಪಂ ಸರ್ವಸದಸ್ಯರು, ಶೈಲಾ ಅಂಗಡಿ, ಸುಸ್ರೂಕಿಯರಾದ ನಾಗರತ್ನಾ ಮಾಟೋಳ್ಳಿ, ಗೀತಾ ಜಕಾತಿ, ಚಂದ್ರಪ್ಪ ದಂಡಿನ, ಎಲ್ಲವ್ವ ಚೌಲಗಿ, ವೀಣಾ ಟಾಕೂರ, ಶ್ರೀದೇವಿ ನಾಯ್ಕ, ಇನ್ನಿತರರಿದ್ದರು.