
ರಬಕವಿ-ಬನಹಟ್ಟಿ,ಜ.೩೦. ಯಾವುದೇ ವ್ಯಕ್ತಿ ತನ್ನ ಜನಪರ ಧೋರಣೆಗಳಿಂದ ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಜನಪ್ರೀಯವಾಗುವ ಜೊತೆಗೆ ತನ್ನ ವ್ಯಕ್ತಿತ್ವನ್ನೂ ಸಬಲಗೊಳಿಸಲು ಸಾಧ್ಯವೆಂಬುದನ್ನು ಗ್ರಾಮಪಂಚಾಯತಿ ಅಧ್ಯಕ್ಷೆ ರೇಖಾ ಕಾಂತಿ ನಿರೂಪಿಸಿದ್ದಾರೆಂದು ಬಿಜೆಪಿ ಧುರೀಣ ಆನಂದ ಕಂಪು ಹೇಳಿದರು.
ಗ್ರಾಪಂ ಅಧ್ಯಕ್ಷೆ ರೇಖಾ ಕಾಂತಿ ಪೌರಕಾರ್ಮಿಕರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜಕೀಯದಲ್ಲಿ ಒಳ್ಳೆಯ ಮತ್ತು ಕೆಟ್ಟ ಅನುಭವಗಳಾಗುತ್ತವೆ. ಆದರೆ ಜನಪರ ಧೋರಣೆಯಡಿ ಕಾರ್ಯ ನಿರ್ವಹಿಸುವ ವ್ಯಕ್ತಿಗಳು ಜನಮಾನಸದಲ್ಲಿ ಚಿರಸ್ಥಾತಿಯಾಗುತ್ತಾರೆಂದರು. ಪ್ರಾಚಾರ್ಯ ಶರತ್ಚಂದ್ರ ಜಂಬಗಿ ಮಾತನಾಡಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವತ್ತ ತಮ್ಮ ಅಧಿಕಾರವಧಿಯಲ್ಲಿ ಅಧ್ಯಕ್ಷೆ ರೇಖಾ ಕಾಂತಿ ಯಶಸಿಯಾಗಿದ್ದು, ಪೌರಕಾರ್ಮಿಕರು ಗ್ರಾಮ ನೈರ್ಮಲ್ಯೀಕರಣದಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿದ್ದು ಅಂಥ ಕಾರ್ಮಿಕರ ಸನ್ಮಾನಿಸಿರುವುದು ಸ್ತುತ್ಯಾರ್ಹವಾಗಿದೆಯೆಂದರು. ಅಧ್ಯಕ್ಷೆ ರೇಖಾ ಕಾಂತಿ ತಮ್ಮ ಅಧಿಕಾರವಧಿಯಲ್ಲಿ ಗ್ರಾಮದ ಹಿರಿಯರು, ಧುರೀಣರು ನನಗೆ ಸೂಕ್ತ ಸಲಹೆ, ಮಾರ್ಗದರ್ಶನ ಮಾಡಿದ್ದರಿಂದ ಹಾಗೂ ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗೆ ನೇರವಾಗಿ ನನ್ನ ಸಂಪರ್ಕಿಸಿದ್ದರಿAದ ನನಗೆ ಕಾರ್ಯದ ಒತ್ತಡವಾಗಲಿಲ್ಲ. ಇಂದು ನಮ್ಮ ಅಧಿಕಾರವಧಿಯ ಕೊನೆಯ ದಿನವಾಗಿದ್ದರಿಂದ ಪೌರಕಾರ್ಮಿಕರ ಉಪಕಾರ ಸ್ಮರಿಸಲು ಹಾಗೂ ಗುರು-ಹಿರಿಯರ ಉಪಕೃತಿಗೆ ಸನ್ಮಾನ ಮತ್ತು ಔತಣಕೂಟ ಏರ್ಪಡಿಸಿದ್ದು, ಎಲ್ಲರ ಆಶೀರ್ವಾದವಿರಲಿ ಎಂದರು.
ಪಿಡಿಓ, ಸಿಬ್ಬಂದಿವರ್ಗ, ಈರಪ್ಪ ವಾಲಿ, ಈರಪ್ಪ ಕಡಕಭಾವಿ, ಮಲ್ಲಪ್ಪ ಗಣಿ, ಶಿವಲಿಂಗ ಅಂಗಡಿ, ಜನುಮಂತ ಹೂಗಾರ, ಚನ್ನಮಲ್ಲ ಕಂಪು, ಮಹೇಶ ಚಿಂಚಖAಡಿ, ಮ.ಕೃ.ಮೇಗಾಡಿ, ಬಸಯ್ಯ ವಸ್ತçದ, ಸಿದ್ದಪ್ಪ ಕಂಚು, ಬಾಲಚಂದ್ರ ಪಟ್ಟಣಶೆಟ್ಟಿ, ಸುಭಾಸ ಕಾಂತಿ, ಗುರು ಮರಡಿಮಠ, ದಾನಪ್ಪ ಆಸಂಗಿ,ಬಸವರಾಜ ಬಳವಾಡ, ಮಲ್ಲಿಕಾರ್ಜುನ ತುಂಗಳ, ಕಿರಣ ಆಳಗಿ, ಬಸವರಾಜ ಪಟ್ಟಣ, ವಿಶ್ವಜ ಕಾಡದೇವರ, ಕಾಡೇಶ ಕಂಪು, ಕಾಡಪ್ಪ ಆಸಂಗಿ, ಸದಾಶಿವ ಅಂಗಡಿ, ಮುತ್ತು ತಳವಾರ, ಬಸಪ್ಪ ಶೇಗುಣಸಿ ಸೇರಿದಂತೆ ಅನೇಕರಿದ್ದರು.
























