ಡಾ.ಶರಣಬಸವಪ್ಪ ಅಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಕಲಬುರಗಿ,ಆ.20-ನೂತನ ವಿದ್ಯಾಲಯ ಮಾಜಿ ವಿದ್ಯಾರ್ಥಿಗಳ ಸಂಘದ ವತಿಯಿಂದ ಡಾ.ಶರಣಬಸವಪ್ಪ ಅಪ್ಪಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನೂತನ ವಿದ್ಯಾಲಯದ ಕಾಂiÀರ್iಕಾರಿ ಮಂಡಳಿ ಸದಸ್ಯ ಪಾಂಡುರಂಗರಾವ್ ದೇಶಮುಖ ಅವರು ಮಾತನಾಡಿ, ಡಾ.ಶರಣಬಸವಪ್ಪ ಅಪ್ಪಾ ಅವರು ಈ ಹಿಂದುಳಿದ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ, ದಾಸೋಹ ಸೇವೆಯ ಮೂಲಕ ತಮ್ಮ ಹೆಸರನ್ನು ಚಿರಸ್ಥಾಯಿ ಆಗಿಸಿದ್ದಾರೆ. ಈ ಭಾಗದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಆದರ್ಶ ಜೀವನದ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಅದರಲ್ಲೂ ಅಪ್ಪಾ ಅವರು ಎನ್ ವಿ ಸಂಸ್ಥೆಯ ಹಳೆಯ ವಿದ್ಯಾರ್ಥಿ ಎಂದು ಸ್ಮರಿಸಿದರು. ಅಲ್ಲದೆ ನೂತನ ವಿದ್ಯಾಲಯದ ಅಧ್ಯಕ್ಷರಾದ ಡಾ.ಗಿರೀಶ್ ಗಲಗಲಿ ಮಾತನಾಡಿ, ಈ ಭಾಗಕ್ಕೆ ಅಪ್ಪಾ ಅವರ ಕೊಡುಗೆ ಅನನ್ಯವಾದುದು. ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ದಾಸೋಹ ಸೇವೆ ಮಾಡುವ ಮೂಲಕ ತಮ್ಮದೇ ಆದ ವಿಶಿಷ್ಟ ಸಾಧನೆ ಮಾಡಿದ್ದಾರೆ ಎಂದು ಸ್ಮರಿಸಿದರು.
ಅಪ್ಪಾ ಅವರ ನಿಧನದ ಹಿನ್ನೆಲೆಯಲ್ಲಿ ಅಪ್ಪಾ ಅವರ ಗೌರವಾರ್ಥ ಮರುದಿನ ಶಾಲೆಗೆ ರಜೆ ಗೋಷಿಸಲಾಯಿತು.
ಕಾರ್ಯಕ್ರಮದಲ್ಲಿ ಸುಹಾಸ್ ಆರ್. ಖನಗೆ, ಅನಂತ ಜೀ ಗುಡಿ, ಅರುಣ ಖರ್ಗಲಿಕರ, ಸುಂದರ ಕುಲಕರ್ಣಿ, ರಾಮಚಂದ್ರ ಶಾನಬೋಗ ಉಪಸ್ಥಿತರಿದ್ದರು.